ETV Bharat / sitara

ಹುಟ್ಟು ಹಬ್ಬದ ದಿನವೂ ಕೆಲಸಕ್ಕೆ ಹಾಜರಾದ ಜಾನ್ವಿ ಕಪೂರ್​...

author img

By

Published : Mar 6, 2021, 1:05 PM IST

ನಟಿ ಜಾನ್ವಿ ಕಪೂರ್​ ತನ್ನ ಮುಂಬರುವ ಚಿತ್ರ ರೂಹಿ ಪ್ರಚಾರದ ಕಾರ್ಯದಲ್ಲಿ ಈಗಾಗಲೇ ಸಾಕಷ್ಟು ಬ್ಯುಸಿಯಾಗಿದ್ದು, ಇಂದು ತಮ್ಮ ಹುಟ್ಟಹಬ್ಬವನ್ನು ಗುಡ್ ಲಕ್ ಜೆರ್ರಿ ಚಿತ್ರದ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವ ಮೂಲಕ ಈ ದಿನ ಕಳೆಯುವುದಾಗಿ ಹೇಳಿದ್ದಾರೆ.

Janhvi Kapoor
ಜಾನ್ವಿ ಕಪೂರ್

ಮುಂಬೈ: ಬಾಲಿವುಡ್​ ನಟಿ ಜಾನ್ವಿ ಕಪೂರ್​ ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದು, ತನ್ನ ಹುಟ್ಟುಹಬ್ಬದ ದಿನವೂ ಕೆಲಸದಲ್ಲಿ ಬ್ಯುಸಿಯಾಗಿರುವ ನಟಿ ತನ್ನ ಮುಂದಿನ ಚಿತ್ರ ಗುಡ್ ಲಕ್ ಜೆರ್ರಿಗಾಗಿ ಇಂದು ಪಟಿಯಾಲದಲ್ಲಿ ಇಡೀ ದಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹುಟ್ಟ ಹಬ್ಬದಂದು ಕೆಲಸ ಮಾಡಲು ಇಷ್ಟ ಎಂದಿರುವ ಜಾನ್ವಿ "ನಾನು ಈ ವರ್ಷ ನನ್ನ ಹುಟ್ಟುಹಬ್ಬದ ದಿನದಂದು ಪಟಿಯಾಲದಲ್ಲಿ ಗುಡ್ ಲಕ್ ಜೆರ್ರಿ ಶೂಟಿಂಗ್​ನಲ್ಲಿ ಭಾಗಿಯಾಗುವುದಾಗಿ ಹೇಳಿದ್ದಾರೆ. ಅಲ್ಲದೆ ಪ್ರಾಮಾಣಿಕವಾಗಿ, ನಾನು ಯಾವಾಗಲೂ ನನ್ನ ಜನ್ಮದಿನದಂದು ಶೂಟಿಂಗ್ ಮಾಡಲು ಬಯಸುತ್ತೇನೆ. ಹುಟ್ಟು ಹಬ್ಬದಂದು ಸಮಯ ಕಳೆಯಲು ಶೂಟಿಂಗ್​ ಸ್ಟಾಟ್​ಗಿಂತ ಮತ್ತೊಂದು ಸ್ಥಳ ಬೇಕಿಲ್ಲ ಎಂದಿದ್ದಾರೆ.

ಗುಡ್ ಲಕ್ ಜೆರ್ರಿ ಚಿತ್ರವನ್ನು ಆನಂದ್ ಎಲ್. ರಾಯ್ ನಿರ್ಮಿಸುತ್ತಿದ್ದು, ಪಂಕಜ್ ಮಟ್ಟಾ ಚಿತ್ರ ಕಥೆ ಬರೆದಿದ್ದಾರೆ ಮತ್ತು ಸಿದ್ದಾರ್ಥ್ ಸೇನ್‌ಗುಪ್ತಾ ನಿರ್ದೇಶಿಸಿದ್ದಾರೆ, ಮತ್ತು ಈ ಚಿತ್ರದಲ್ಲಿ ದೀಪಕ್ ದೋಬ್ರಿಯಲ್, ಮೀಟಾ ವಶಿಶ್ತ್, ನೀರಜ್ ಸೂದ್ ಮತ್ತು ಸುಶಾಂತ್ ಸಿಂಗ್ ಕೂಡ ಇದ್ದಾರೆ.

ಜಾನ್ವಿ ಅವರ ಹೊಸ ಚಿತ್ರ ರೂಹಿ ಇದೇ ಮಾರ್ಚ್ 11 ರಂದು ಬಿಡುಗಡೆಯಾಗುತ್ತದೆ. ಈ ಚಿತ್ರದಲ್ಲಿ ಅವರು ರಾಜ್‌ ಕುಮಾರ್​ ರಾವ್ ಮತ್ತು ವರುಣ್ ಶರ್ಮಾ ಅವರೊಂದಿಗೆ ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.