ಜಾಹ್ನವಿ ಕಪೂರ್ ಹಾಗೂ ರಾಜ್ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿನಟಿಸಿರುವ ಹಾರರ್-ಕಾಮಿಡಿ 'ರೂಹಿ' ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಹಾರ್ದಿಕ್ ಮೆಹ್ತಾ ಈ ಚಿತ್ರವನ್ನು ನಿರ್ದೇಶಿಸಿದ್ದು ಮೊದಲ ಚಿತ್ರದಲ್ಲೇ ಸಿನಿಪ್ರಿಯರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: 'ಆಶ್ರಮ್' ವಿರುದ್ಧ ಎಫ್ಐಆರ್: ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಹೈಕೋರ್ಟ್ ಸೂಚನೆ
ಇಂದು ಬಿಡುಗಡೆಯಾಗಿರುವ 3:01 ನಿಮಿಷದ 'ರೂಹಿ' ಟ್ರೇಲರ್ನಲ್ಲಿ ಭಯಾನಕ ದೃಶ್ಯಗಳನ್ನು ನೀವು ನೋಡಬಹುದು. ಸಿನಿಮಾದಲ್ಲಿ ಹಾರರ್ ಜೊತೆಗೆ ಕಾಮಿಡಿಯನ್ನೂ ಸೇರಿಸಲಾಗಿದ್ದು ಈ ಟ್ರೇಲರ್, ಸಿನಿಮಾ ಯಶಸ್ವಿಯಾಗುವ ಎಲ್ಲಾ ಭರವಸೆಯನ್ನೂ ನೀಡಿದೆ. ಕೇಂದ್ರ ಸರ್ಕಾರವು ಕೋವಿಡ್-19 ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಥಿಯೇಟರ್ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ. ಜಿಯೋ ಸ್ಟುಡಿಯೋ ಹಾಗೂ ಮ್ಯಾಡ್ಡಾಕ್ ಫಿಲ್ಮ್ಸ್ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದಲ್ಲಿ ವರುಣ್ ಶರ್ಮಾ ಕೂಡಾ ನಟಿಸಿದ್ದಾರೆ. ಫರ್ಕಿ ಹೆಲ್ಮರ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮಿರ್ಗ್ದೀಪ್ ಸಿಂಗ್ ಲಂಬಾ ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದಾರೆ. ಮಾರ್ಚ್ 11 ರಂದು 'ರೂಹಿ' ಸಿನಿಮಾ ತೆರೆ ಕಾಣುತ್ತಿದೆ.