ಹೈದರಾಬಾದ್ (ತೆಲಂಗಾಣ) : ಬಹುಭಾಷಾ ನಟಿ ಸಮಂತಾ ರುತ್ ಪ್ರಭು ನಟ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಟಾಲಿವುಡ್ನಲ್ಲಿ ಹತ್ತು-ಹಲವು ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ಈ ಬಗ್ಗೆ ಇಬ್ಬರೂ ತಮ್ಮ ವಿವಾಹ ವಿಚ್ಛೇದನಕ್ಕೆ ಕಾರಣವೇನು ಎಂಬುದಕ್ಕೆ ಈವರೆಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡಿಲ್ಲ.
- " class="align-text-top noRightClick twitterSection" data="
">
ಸಾಮಾಜಿಕ ಜಾಲತಾಣದಲ್ಲಿ ಮಾತ್ರ ನಟಿ ಸಮಂತಾ ಅವರ ಕೆಲವು ಕಾರಣಗಳಿಂದ ಇವರಿಬ್ಬರ ಸಂಬಂಧ ಮುರಿದು ಹೋಗಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇದು ಸತ್ಯಕ್ಕೆ ದೂರ ಅನ್ನೋದನ್ನು ಅವರ ಆಪ್ತ ಸ್ನೇಹಿತೆಯೊಬ್ಬರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇದರ ನಡುವೆ ಈಗ ಜಾಲತಾಣದಲ್ಲಿ ಮತ್ತೊಂದು ಸುದ್ದಿ ಓಡಾಡುತ್ತಿದೆ.
ಸಮಂತಾ ಮಗುವನ್ನು ಹೊಂದಲು ಇಚ್ಛಿಸದ ಕಾರಣ ಇವರ ಸಂಬಂಧ ಮುರಿದು ಬಿತ್ತು ಅನ್ನೋದು ಸುಳ್ಳು. ಜಾಲತಾಣದಲ್ಲಿ ಹರಿದಾಡುತ್ತಿರುವ ಅವರಿಬ್ಬರ ನಡುವಿನ ವದಂತಿಗಳತ್ತ ಅಭಿಮಾನಿಗಳು ಕಿವಿಕೊಡಬಾರದು ಎಂದು ಮನವಿ ಮಾಡಿಕೊಂಡಿದ್ದ ಅವರ ಸ್ನೇಹಿತೆ, ಕುಟುಂಬಕ್ಕಾಗಿ ಸಮಂತಾ ತೆಗೆದುಕೊಂಡ ನಿರ್ಧಾರದ ಬಗ್ಗೆಯೂ ಬಹಿರಂಗಪಡಿಸಿದ್ದರು.
ಸಮಂತಾ ಕುಟುಂಬದ ಬೆಳವಣಿಗಾಗಿ ತಾವು ಈ ಹಿಂದೆ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದ ಬಗ್ಗೆ ಈಗ ಮತ್ತೆ ಸುದ್ದಿಯಾಗಿದೆ. ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ನಾಯಕನಾಗಿ ನಟಿಸಬೇಕಿದ್ದ ಲಯನ್ ಎಂಬ ಬಿಗ್ ಬಜೆಟ್ ಚಿತ್ರದಲ್ಲಿ ಸಮಂತಾಗೆ ಆಫರ್ವೊಂದು ಹುಡುಕಿಕೊಂಡು ಬಂದಿತ್ತಂತೆ.
ಬಿಗಿಲ್, ಮೆರ್ಸಲ್ ಹಾಗೂ ತೇರಿ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಅಟ್ಲೀ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ನಾಯಕಿಯಾಗಿ ಸಮಂತಾ ಅವರನ್ನು ಮೊದಲು ಸಂಪರ್ಕ ಮಾಡಿದ್ದರಂತೆ.
ಆದರೆ, ನಾಗ ಚೈತನ್ಯ ಅವರ ಮಗುವಿನ ತಾಯಿ ಆಗಬೇಕು, ಕುಟುಂಬ ಬೆಳೆಯಬೇಕು ಎಂಬ ಕಾರಣದಿಂದಾಗಿ ನಟಿ ಸಮಂತಾ ಬಂದ ಅವಕಾಶವನ್ನು ಹಾಗೆಯೇ ನಯವಾಗಿಯೇ ನಿರಾಕರಿಸಿದ್ದರಂತೆ. ಬಳಿಕ ಈ ಪಾತ್ರಕ್ಕೆ ನಟಿ ನಯನತಾರಾ ಅವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಚಿತ್ರ ತಂಡ ಯಶಸ್ವಿ ಚಿತ್ರೀಕರಣ ನಡೆಸುತ್ತಿದೆ ಅನ್ನೋದು ಸದ್ಯದ ಮಾಹಿತಿ. ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಮಾತ್ರ ನಟಿ ಸಮಂತಾ ಆಗಾಗ ಕಿಡಿ ಕಾರುತ್ತಲೇ ಇದ್ದಾರೆ.
- " class="align-text-top noRightClick twitterSection" data="
">
ಸಮಂತಾ ಮತ್ತು ನಾಗ ಚೈತನ್ಯ ಇತ್ತೀಚೆಗೆ ತಾವು ವಿಚ್ಛೇದನ ತೆಗೆದುಕೊಳ್ಳುತ್ತಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರು ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದರು. ಇದಕ್ಕೆ ಟಾಲಿವುಡ್ ಸಿನಿಮಾ ರಂಗದಲ್ಲಿ ಹಲವು ಕಪೋಲಕಲ್ಪಿತ ವದಂತಿಗಳು ಹರಿದಾಡ ತೊಡಗಿದ್ದವು.
ಆದರೆ, ಸಮಂತಾ ಮತ್ತು ಚೈತನ್ಯ ಇಬ್ಬರು ಯಾವಾಗಲೂ ತಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಇಟ್ಟುಕೊಳ್ಳುತ್ತಾರೆ ಎಂದು ಹಲವರು ಇವರಿಬ್ಬರ ವಿಚ್ಛೇದನವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.