ಮುಂಬೈ: ಇರ್ಫಾನ್ ಖಾನ್ ಅಕಾಲಿಕ ನಿಧನದ ಬಳಿಕ ಅವರ ಕುರಿತು ಆನ್‌ಲೈನ್ ಹುಡುಕಾಟದ ಪ್ರಮಾಣ ಭಾರಿ ಏರಿಕೆಯಾಗಿದೆ.
ತಮ್ಮ 54ನೇ ವಯಸ್ಸಿನಲ್ಲಿ, ಇರ್ಫಾನ್ ಬುಧವಾರ ಕೊನೆಯುಸಿರೆಳೆದರು. ಅವರನ್ನು ಮುಂಬೈನ ಕೊಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎಸ್‌ಇಎಂ ರಶ್ ಅಧ್ಯಯನದ ಪ್ರಕಾರ, ಇರ್ಫಾನ್ ಅವರ ನಿಧನದ ಬಳಿಕ ಅವರ ಕುರಿತು ಆನ್ಲೈನ್ನಲ್ಲಿ ಹುಡುಕಾಟ ಅಧಿಕವಾಗಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ, ಇರ್ಫಾನ್ ಕುರಿತು ಆನ್‌ಲೈನ್ ಹುಡುಕಾಟವು ಶೇ. 6,900ರಷ್ಟು ಹೆಚ್ಚಾಗಿದ್ದು, ಜಾಗತಿಕವಾಗಿ, ಶೇ.6,200ರಷ್ಟು ಏರಿಕೆಯಾಗಿದೆ.
ಟ್ವಿಟರ್ನಲ್ಲಿ ಅಭಿಮಾನಿಗಳು ಹ್ಯಾಶ್ಟ್ಯಾಗ್ ಮೂಲಕ ಗೌರವ ಸಲ್ಲಿಸಿದ್ದಾರೆ. #irrfankhan, #ripirrfankhan, #ripirfankhan, #irrfan, #restinpiece ಮತ್ತು #rip. ಹ್ಯಾಶ್‌ಟ್ಯಾಗ್‌ಗಳಲ್ಲಿನ ಟ್ವೀಟ್‌ಗಳ ಸಂಖ್ಯೆ ಹೆಚ್ಚಾಗಿದೆ.