ಮುಂಬೈ (ಮಹಾರಾಷ್ಟ್ರ): ನಟಿ ಮಲೈಕಾ ಅರೋರಾ ಅವರ ಸಹೋದರಿ ಅಮೃತಾ ಅರೋರಾ ಇಂದು ತಮ್ಮ ಹುಟ್ಟು ಹಬ್ಬದ ಸಂಭ್ರದಲ್ಲಿದ್ದಾರೆ. 44ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಬಾಲಿವುಡ್ನ ಗರ್ಲ್ ಗ್ಯಾಂಗ್ ಶುಭಾಶಯ ತಿಳಿಸಿದೆ. ಕರೀನಾ ಕಪೂರ್ ಖಾನ್ ಮತ್ತು ಅವರ ಗರ್ಲ್ ಗ್ಯಾಂಗ್ ನಿನ್ನೆ ರಾತ್ರಿಯೇ ಕೇಕ್ ಕಟ್ ಮಾಡಿಸಿ ಸಂಭ್ರಮಕ್ಕೆ ಸಾಕ್ಷಿಯಾದರು.
- " class="align-text-top noRightClick twitterSection" data="
">
ಇದನ್ನೂ ಓದಿ: 60 ಅಂತಸ್ತಿನ ಕಟ್ಟಡದಿಂದ ಬಿದ್ದು Miss USA-2019 ನಿಧನ: ಕಂಬನಿ ಮಿಡಿದ ಹರ್ನಾಜ್ ಸಂಧು
ಕರೀನಾ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದೊಡ್ಡ ಕೇಕ್ ಜೊತೆಗೆ ಚಿಕ್ಕದಾಗಿ ನಡೆದ ಪಾರ್ಟಿಯಲ್ಲಿ ಅಮೃತಾ ಅವರನ್ನು ತಬ್ಬಿಕೊಂಡಿರುವುದನ್ನು ಕಾಣಬಹುದು. ಮಲೈಕಾ ಅವರು ಪಾರ್ಟಿ ಕ್ಯಾಪ್ ಧರಿಸಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಮಲೈಕಾ ಅವರ ಆಪ್ತ ಮೇಕಪ್ ಕಲಾವಿದೆ ಮಲ್ಲಿಕಾ ಭಟ್ ಅವರನ್ನೂ ಫೋಟೋದಲ್ಲಿ ಕಾಣಬಹುದು.
- " class="align-text-top noRightClick twitterSection" data="
">
ಕರಿಷ್ಮಾ ಕಪೂರ್, ಮಲ್ಲಿಕಾ ಭಟ್, ಅರ್ಜುನ್ ಕಪೂರ್ ಕೂಡ ಪಾರ್ಟಿಯಲ್ಲಿರುವುದು ಕಂಡು ಬಂದಿದೆ. ಮಧ್ಯ ರಾತ್ರಿ ಮನೆಗೆ ಬಂದು ವಿಶ್ ಮಾಡಿದ್ದಕ್ಕೆ ನಟಿ ಅಮೃತಾ ಅರೋರಾ ಹರ್ಷ ವ್ಯಕ್ತಪಡಿಸಿದ್ದಾರೆ. ಅಪರೂಪಕ್ಕೊಮ್ಮೆ ಸೇರುವ ಈ ಗ್ಯಾಂಗ್ ಇಡೀ ರಾತ್ರಿ ಅಲ್ಲಿಯೇ ಬೀಡು ಬಿಟ್ಟಿತ್ತು. ಈ ಸಂಭ್ರಮದ ಫೋಟೋ ಜಾಲತಾಣದಲ್ಲಿ ಹರಿದಾಡುತ್ತಿವೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮಲೈಕಾ ಅರೋರಾ ಕೂಡ ಸಹೋದರಿಯ ಹುಟ್ಟುಹಬ್ಬಕ್ಕೆ ಆಕರ್ಷಕ ಶೀರ್ಷಿಕೆಯೊಂದಿಗೆ ವಿಶ್ ಮಾಡಿದ್ದಾರೆ. ಅದನ್ನು ಜಾಲತಾಣದಲ್ಲಿ ಶೇರ್ ಸಹ ಮಾಡಿಕೊಂಡಿದ್ದಾರೆ. ನಮ್ಮ ಸಂಬಂಧ ಬೇರ್ಪಡಿಸಲಾಗದ ಬಾಂಧವ್ಯ ಹೊಂದಿದೆ. ಒಟ್ಟಿಗೆ ಸೇರಿ ಈ ರೀತಿಯ ಸಂತೋಷಕ ಕೂಟ ಮಾಡಲು ಆಲೋಚನೆ ಮಾಡುತ್ತಿರುತ್ತೇವೆ ಎಂದು ಬರೆದುಕೊಂಡಿದ್ದಾರೆ.