ನವದೆಹಲಿ: ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ 'ಸೋಂಚಿರಿಯಾ' ಚಿತ್ರದ ಸಹನಟಿ ಭೂಮಿ ಪೆಡ್ನೇಕರ್, ಸುಶಾಂತ್ ಗೌರವಾರ್ಥವಾಗಿ 550ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ನೀಡುವುದಾಗಿ ಹೇಳಿದ್ದಾರೆ.
![sushanth and bhumi](https://etvbharatimages.akamaized.net/etvbharat/prod-images/asdasdasdas_2906newsroom_1593417483_457.jpg)
ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಕುರಿತು ಘೋಷಣೆ ಮಾಡಿರುವ ಭೂಮಿ, ಸುಶಾಂತ್ ಫೊಟೋವನ್ನು ಕೂಡಾ ಹಂಚಿಕೊಂಡಿದ್ದಾರೆ.
"ನನ್ನ ಆತ್ಮೀಯ ಸ್ನೇಹಿತನ ನೆನಪಿಗಾಗಿ ಏಕ್ ಸಾಥ್ ಫೌಂಡೇಶನ್ ಮೂಲಕ 550 ಬಡ ಕುಟುಂಬಗಳಿಗೆ ಆಹಾರವನ್ನು ನೀಡುವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ. ಅಗತ್ಯವಿರುವ ಎಲ್ಲರ ಬಗ್ಗೆ ಸಹಾನುಭೂತಿ ಮತ್ತು ಪ್ರೀತಿಯನ್ನು ತೋರಿಸೋಣ" ಎಂದು ಪಡ್ನೆಕರ್ ಬರೆದಿದ್ದಾರೆ.
- " class="align-text-top noRightClick twitterSection" data="
">
ಅಭಿಷೇಕ್ ಚೌಬೆ ನಿರ್ದೇಶನದಲ್ಲಿ ಇಬ್ಬರೂ ತೆರೆ ಹಂಚಿಕೊಂಡಿದ್ದರು. ಈ ಚಿತ್ರ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿತ್ತು.