ETV Bharat / sitara

ಆದಷ್ಟು ಬೇಗ ಕ್ಯಾನ್ಸರ್​ ಗೆದ್ದು ಬರುವೆ: ನಟ ಸಂಜಯ್​ ದತ್​ ವಿಶ್ವಾಸ - ಇನ್​​ಸ್ಟಾಗ್ರಾಮ್​ನಲ್ಲಿ ವಿಡಿಯೋ ಹರಿಬಿಟ್ಟ ಸಂಜಯ್​ ದತ್​

ಶ್ವಾಸಕೋಶದ ಕ್ಯಾನ್ಸರ್​​ನಿಂದ ಬಳಲುತ್ತಿರುವ ಬಾಲಿವುಡ್​​ ನಟ ಸಂಜಯ್ ದತ್​​​ ಇನ್​​ಸ್ಟಾಗ್ರಾಮ್​​ನಲ್ಲಿ ವಿಡಿಯೋ ಶೇರ್​ ಮಾಡಿದ್ದು, ಆದಷ್ಟು ಬೇಗ ಮಹಾಮಾರಿ ಕ್ಯಾನ್ಸರ್‌ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Actor Sanjay Dutt
Actor Sanjay Dutt
author img

By

Published : Oct 15, 2020, 3:16 PM IST

ಮುಂಬೈ: ಬಾಲಿವುಡ್ ನಟ ಸಂಜಯ್​ ದತ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು​ ಖಾಯಿಲೆಯ ವಿರುದ್ಧದ ಯುದ್ಧದಲ್ಲಿ ಜಯ ಸಾಧಿಸುವುದಾಗಿ ಇನ್ಸ್‌ಟಾಗ್ರಾಂ ವಿಡಿಯೋ ಮೂಲಕ ತಿಳಿಸಿದ್ದಾರೆ.

61 ವರ್ಷದ ನಟ ಸಂಜಯ್​ ದತ್​​ ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಸದ್ಯ ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 'ಇದು ನನ್ನ ಜೀವನದ ಇತ್ತೀಚಿನ ಗಾಯ. ನಾನು ಅದನ್ನು ಸೋಲಿಸುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಶ್​​ ನಟನೆಯ ಕೆಜಿಎಫ್ ಭಾಗ 2 ರಲ್ಲಿ ಸಂಜಯ್​ ದತ್​ ನಟಿಸಿದ್ದಾರೆ. ಮುಂದಿನ ತಿಂಗಳಿಂದ ಅವರು ಕೂಡ ಶೂಟಿಂಗ್​​ನಲ್ಲಿ ಭಾಗಿಯಾಗಲಿದ್ದಾರೆ. ಈ ಚಿತ್ರದ ಮೂಲಕ ದತ್​ ಸ್ಯಾಂಡಲ್​ವುಡ್​​ಗೆ ಪದಾರ್ಪಣೆ ಮಾಡಲಿದ್ದಾರೆ. 'ನವೆಂಬರ್​ ತಿಂಗಳಿಂದ ಮತ್ತೆ ಶೂಟಿಂಗ್​​ ಸೆಟ್​ಗೆ ತೆರಳುತ್ತಿರುವುದು ಖುಷಿ ನೀಡಿದೆ. ಚಿಕಿತ್ಸೆಗೋಸ್ಕರ ಇದೀಗ ನನ್ನ ದೇಹದ ಭಾರ ಕಡಿಮೆ ಮಾಡಿಕೊಂಡಿದ್ದೇನೆ' ಎಂದು ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.

ಆಗಸ್ಟ್​​ ತಿಂಗಳಲ್ಲಿ ದತ್‌ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವೇಳೆ ಅವರಿಗೆ 4ನೇ ಹಂತದ ಶ್ವಾಸಕೋಶದ​​​ ಕ್ಯಾನ್ಸರ್​ ಇರುವುದು ಗೊತ್ತಾಗಿತ್ತು. ಹಾಗಾಗಿ ಸಿನಿಮಾದಿಂದ ಸಣ್ಣ ಬ್ರೇಕ್​ ಪಡೆದುಕೊಳ್ಳುವುದಾಗಿ ಆ ಸಂದರ್ಭದಲ್ಲಿ ಟ್ವೀಟ್​ ಮಾಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.