ಹೈದರಾಬಾದ್ : ನಮ್ಮ ಪ್ರೇಮಕಥೆ ಒಂದು ರೀತಿ ಚೇತನ್ ಭಗತ್ ಅವರ ಕಾದಂಬರಿ 2 ಸ್ಟೇಟ್ಸ್: ದಿ ಸ್ಟೋರಿ ಆಫ್ ಮೈ ಮ್ಯಾರೇಜ್ ಅನ್ನು ಹೋಲುತ್ತದೆ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ ಹೇಳಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ ಅವರನ್ನು ಮದುವೆಯಾಗಿರುವ ಬಾಲಿವುಡ್ನ ಈ ನಟ ತಮ್ಮ ವಿವಾಹದ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಮ್ಮನ್ನು ತಾವು 'ಶತಮಾನದ ಗಂಡ '('Husband of the century')ಎಂದು ಕರೆದುಕೊಂಡಿದ್ದಾರೆ.
ರಣವೀರ್ ಮುಂಬರಲಿರುವ ಕ್ವಿಜ್ ಕಾರ್ಯಕ್ರಮ 'ದಿ ಬಿಗ್ ಪಿಕ್ಚರ್'ನೊಂದಿಗೆ ಕಿರುತೆರೆಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಶೋ ಆರಂಭಕ್ಕೂ ಮುನ್ನ ಕಲರ್ಸ್ ಕಿರು ವಿಡಿಯೋವೊಂದನ್ನು ಪ್ರಕಟಿಸಿದೆ. ಈ ಪ್ರೋಮೊದಲ್ಲಿ ಸ್ವತಃ ರಣವೀರ್ ಸಿಂಗ್ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಅದರಲ್ಲಿ ದೀಪಿಕಾ ಜೊತೆಗಿನ ಫೋಟೋವೊಂದರ ಬಗೆಗೆ ಮಾತನಾಡುವಾಗ ಈ ವಿಚಾರವನ್ನು ರಣವೀರ್ ಹೇಳಿದ್ದಾರೆ.
- " class="align-text-top noRightClick twitterSection" data="
">
ಫೋಟೋ ಕುರಿತಾದ ಪ್ರಶ್ನೆಗೆ ಉತ್ತರಿಸುವಾಗ, ರಣವೀರ್ ಮತ್ತು ದೀಪಿಕಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ ಕುತೂಹಲಕಾರಿ ಕಥೆಯನ್ನು ಬಹಿರಂಗಪಡಿಸಿದರು. ಅವರು ಅಮೃತಸರದ ಗೋಲ್ಡನ್ ಟೆಂಪಲ್ಗೆ ಮತ್ತು ಆಂಧ್ರಪ್ರದೇಶದ ತಿರುಪತಿಗೆ ಹೋಗಿ ದೇವರ ದರ್ಶನ ಮಾಡಿದ್ದಾಗಿ ಹೇಳಿದರು.
"ಮೂಲತಃ, ದೀಪಿಕಾ ಮತ್ತು ನಾನು ನಮ್ಮ ಮೊದಲ ವಾರ್ಷಿಕೋತ್ಸವದಲ್ಲಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕು ಎಂದುಕೊಂಡಿದ್ದೆವು. ನಿಮಗೆ ತಿಳಿದಿರುವಂತೆ, ನಮ್ಮ ಜೀವನವು 2 ರಾಜ್ಯಗಳನ್ನು ಹೋಲುತ್ತದೆ.
ಹೀಗಾಗಿ, ನಮ್ಮ ಮೊದಲ ವಾರ್ಷಿಕೋತ್ಸವದಂದು, ನಾವು ಎರಡೂ ಸ್ಥಳಗಳಿಗೆ ಏಕೆ ಭೇಟಿ ನೀಡಬಾರದು ಎಂದು ನಿರ್ಧರಿಸಿ ನಾವು ಅಮೃತಸರದ ಗೋಲ್ಡನ್ ಟೆಂಪಲ್ಗೆ ಹೋದೆವು ಮತ್ತು ನೀವು ತೋರಿಸುತ್ತಿರುವ ಫೋಟೋ ಅಮೃತಸರಕ್ಕೂ ಮುನ್ನ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದದ್ದು " ಎಂದಿದ್ದಾರೆ.
ತಿರುಪತಿ ದೇವಸ್ಥಾನದ ಆವರಣದಲ್ಲಿ ತೆಗೆದ ಈ ಫೋಟೋ ಬಗ್ಗೆ ನಾನು ಉತ್ತರಿಸಲೇಬೇಕು. ಇಲ್ಲವಾದರೆ, ಮನೆಗೆ ಹೋದಾಗ ಏಟು ಬೀಳುವುದು ಖಚಿತ ಎಂದು ಹೇಳಿದ್ದಾರೆ. 'ದಿ ಬಿಗ್ ಪಿಕ್ಚರ್' ಕ್ವಿಜ್ ಕಾರ್ಯಕ್ರಮ ಅಕ್ಟೋಬರ್ 16 ರಂದು ಕಲರ್ಸ್‌ನಲ್ಲಿ ಪ್ರಾರಂಭವಾಗಲಿದೆ.