ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಅಭಿನಯಿಸಿದ್ದ ಸೂಪರ್ 30 ಚಿತ್ರ ಬಿಡುಗಡೆಯಾಗಿ 4 ತಿಂಗಳ ಬಳಿಕ ರಿಯಲ್ ಹೀರೋ ಆನಂದ್ ಕುಮಾರ್ ಅವರನ್ನ ಭೇಟಿ ಮಾಡಿದ್ದಾರೆ.
-
An evening filled with anecdotes, laughs and smiles as we reminisced and celebrated our #Super30 journey. Thank you Anand Sir and Pranav Sir for making us a part of your lives and story. pic.twitter.com/fmW6a5NJhI
— Hrithik Roshan (@iHrithik) November 16, 2019 " class="align-text-top noRightClick twitterSection" data="
">An evening filled with anecdotes, laughs and smiles as we reminisced and celebrated our #Super30 journey. Thank you Anand Sir and Pranav Sir for making us a part of your lives and story. pic.twitter.com/fmW6a5NJhI
— Hrithik Roshan (@iHrithik) November 16, 2019An evening filled with anecdotes, laughs and smiles as we reminisced and celebrated our #Super30 journey. Thank you Anand Sir and Pranav Sir for making us a part of your lives and story. pic.twitter.com/fmW6a5NJhI
— Hrithik Roshan (@iHrithik) November 16, 2019
ಗಣಿತ ಶಿಕ್ಷಕ ಆನಂದ್ ಕುಮಾರ್ ಅವರ ಜೀವನಾಧಾರಿತ ಚಿತ್ರ ಸೂಪರ್ 30 ಬಾಲಿವುಡ್ನಲ್ಲಿ ದೊಡ್ಡ ಸಕ್ಸಸ್ ಕಂಡಿದೆ. ಸಿನಿಮಾ ಬಿಡುಗಡೆ ಆದಾಗಿನಿಂದ ಅನಂದ್ ಕುಮಾರ್ ಅವರನ್ನ ಭೇಟಿ ಮಾಡಲು ಹೃತಿಕ್ಗೆ ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಆನಂದ್ ಅವರನ್ನ ಭೇಟಿ ಮಾಡಿ ಸಂತಸದ ಕ್ಷಣ ಕಳೆದಿರೋದಾಗಿ ಹೃತಿಕ್ ಹೇಳಿಕೊಂಡಿದ್ದಾರೆ.
ನನ್ನ ತಾಯಿ ಸೂಪರ್ 30 ಚಿತ್ರವನ್ನ ಒಂಭತ್ತು ಬಾರಿ ಥಿಯೇಟರ್ನಲ್ಲಿ ನೋಡಿದ್ದಾರೆ. ಆದರೆ ಆನಂದ್ ಕುಮಾರ್ ಅವರನ್ನ ಭೇಟಿ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೀಗ ಅವರನ್ನ ಭೇಟಿ ಮಾಡಿದ್ದೇವೆ. ನಾವೆಲ್ಲ ಒಟ್ಟಿಗೆ ಕುಳಿತು ಊಟ ಮಾಡುವ ಜೊತೆಗೆ ಸಿನಿಮಾ ಸಕ್ಸಸ್ ಕುರಿತು ಮಾತುಕತೆ ನಡೆಸಿದ್ದೇವೆ ಎಂದು ಹೃತಿಕ್ ಹೇಳಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಆನಂದ್ ಕುಮಾರ್, ನನ್ನ ಜೀವನದ ಕಥೆಯನ್ನ ಜನರ ಮುಂದಿಟ್ಟಿದ್ದಕ್ಕೆ ಚಿತ್ರತಂಡಕ್ಕೆ ಧನ್ಯವಾದಗಳು. ಹೃತಿಕ್ ಒಬ್ಬ ಅದ್ಭುತ್ ನಟ. ಆ ಪಾತ್ರದಲ್ಲಿ ಅವರನ್ನ ಬಿಟ್ಟರೆ ಬೇರೆ ಯಾರನ್ನೂ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನಟಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜುಲೈ ತಿಂಗಳಲ್ಲಿ ತೆರೆ ಕಂಡಿದ್ದ ಸೂಪರ್ 30 ಸಿನಿಮಾ ದೊಡ್ಡ ಸಕ್ಸ್ಸ್ ಕಂಡಿತ್ತು. ಚುತ್ರದಲ್ಲಿನ ಹೃತಿಕ್ ಅಭಿನಯಕ್ಕೆ ಎಲ್ಲೆ ಮೆಚ್ಚುಗೆ ವ್ಯಕ್ತವಾಗಿತ್ತು.