ಮುಂಬೈ: ವಿದ್ಯುತ್ ಜಮ್ವಾಲ್ ಅಭಿನದ ಆಕ್ಷನ್ ಹಾಗೂ ರೊಮ್ಯಾಂಟಿಕ್ 'ಖುದಾ ಹಫೀಜ್' ಚಿತ್ರ ನೋಡಿದ ಬಾಲಿವುಡ್ ನಟ ಹೃತಿಕ್ ರೋಷನ್, ಸಿನಿಮಾವನ್ನು ಹಾಡಿಹೊಗಳಿದ್ದಾರೆ. ಅಲ್ಲದೆ, ಚಿತ್ರವನ್ನು ಎಲ್ಲರೂ ನೋಡುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟರ್ನಲ್ಲಿ ವಿಡಿಯೋ ಮಾಡುವ ಮೂಲಕ 'ಖುದಾ ಹಫೀಜ್' ಚಿತ್ರವನ್ನು ಶ್ಲಾಘಿಸಿದ ಹೃತಿಕ್, ಆನ್ಲೈನ್ನಲ್ಲಿ ಸಿನಿಮಾ ನೋಡಿರುವುದಾಗಿ ತಿಳಿಸಿದ್ದಾರೆ. 'ಖುದಾ ಹಫೀಜ್' ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ನೋಡಿ ನಿಜವಾಗಿಯೂ ನಾನು ಆನಂದಿಸಿದೆ. ನೀವು ನೋಡಿ ಎಂದಿದ್ದಾರೆ.
- " class="align-text-top noRightClick twitterSection" data="
">
ಚಿತ್ರದ ಅದ್ಭುತ ದೃಶ್ಯ ಹಾಗೂ ಹಾಡುಗಳು ನಾನಗೆ ತುಂಬಾ ಇಷ್ಟವಾದವು. ಚಿತ್ರದ ಬಗ್ಗೆ ಇನ್ನುಷ್ಟು ಮಾಹಿತಿ ಪಡೆಯುವ ಕಾತುರತೆ ಹೆಚ್ಚಾಗುತ್ತಿದೆ. ಹಾಗಾಗಿ ಇದೇ ಶನಿವಾರ (ಆ. 22) ಸಂಜೆ 4 ಗಂಟೆಗೆ ಆನ್ಲೈನ್ ಮೂಲಕ ಚಿತ್ರದ ತಂಡದೊಂದಿಗೆ ಮಾತನಾಡಲಿದ್ದೇನೆ. ನೀವು ಪಾಲ್ಗೊಳ್ಳಿ ಎಂದಿದ್ದಾರೆ.
'ಖುದಾ ಹಫೀಜ್' ಸಿನಿಮಾ ಇದೇ ಆ. 14 ರಂದು ಹಾಟ್ಸ್ಟಾರ್ ವಿಐಪಿಯಲ್ಲಿ ಬಿಡುಗಡೆಯಾಗಿದ್ದು ಚಿತ್ರಕ್ಕೆ ಫರುಖ್ ಕಬೀರ್ ಆಕ್ಷನ್ ಕಟ್ ಹೇಳಿದ್ದಾರೆ. ಶಿವಲಿಕಾ ಒಬಾಯ್ ನಾಯಕಿಯಾಗಿ ಕಾಣಿಸಿಕೊಕೊಂಡಿದ್ದಾರೆ.