ETV Bharat / sitara

ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರಂತೆ ಬಾಲಿವುಡ್​ನ ಗ್ರೀಕ್​ ಗಾಡ್ ಹೃತಿಕ್​ ರೋಷನ್! - hrithik roshan House

ಬಾಲಿವುಡ್​ ನಟ ಹೃತಿಕ್​ ರೋಷನ್​ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದು ಸ್ವತಃ ಹೇಳಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅಭಿಮಾನಿ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.

Hrithik
ಗ್ರೀಕ್​ ಗಾಡ್ ಹೃತಿಕ್​ ರೋಷನ್
author img

By

Published : Sep 17, 2021, 9:47 AM IST

ಮುಂಬೈ: ಬಾಲಿವುಡ್​ನ ಗ್ರೀಕ್​ ಗಾಡ್​ ಎಂದೇ ಖ್ಯಾತಿ ಪಡೆದಿರುವ ನಟ ಹೃತಿಕ್​ ರೋಷನ್​ ವಿಶ್ವಾದ್ಯಂತ ಅನೇಕ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ, ಅಂತಹ ಸೆಲೆಬ್ರಿಟಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ ಎಂದರೆ ನೀವು ನಂಬಲೇ ಬೇಕು.

ಹೌದು ಇತ್ತೀಚೆಗೆ ಹೃತಿಕ್​ ಇನ್​ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಶೇರ್​ ಮಾಡಿದ್ದು, ಅದರಲ್ಲಿ ತಾಯಿ ಪಿಂಕಿ ರೋಷನ್ ಜೊತೆ ಬೆಳಗಿನ ತಿಂಡಿ ಸೇವನೆ ಮಾಡಿದ್ದರು. ಆದರೆ, ಆ ಫೋಟೋದಲ್ಲಿರುವ ಅವರ ಅಪಾರ್ಟ್‌ಮೆಂಟ್ ಗೋಡೆ ಹಾಳಾಗಿರುವುದು ಅಭಿಮಾನಿಗಳ ಕಣ್ಣಿಗೆ ಬಿದ್ದಿದೆ. ಇದನ್ನು ನೆಟ್ಟಿಗನೊಬ್ಬ ಪ್ರಶ್ನಿಸಿದ್ದಾನೆ.

"ಸರಿಯಾಗಿ ನೋಡಿ, ಗೋಡೆ ಒದ್ದೆ ಆಗಿದೆ" ಎಂದು ಕಮೆಂಟ್​ ಮಾಡಿದ್ದನು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ, "ಈಗ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದೇವೆ. ಶೀಘ್ರದಲ್ಲಿ ಹೊಸ ಮನೆ ಖರೀದಿ ಮಾಡುತ್ತೇನೆ" ಎಂದು ಹೇಳಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರಂತೆ ಬಾಲಿವುಡ್​ನ ಗ್ರೀಕ್​ ಗಾಡ್ ಹೃತಿಕ್​ ರೋಷನ್

ಅಪಾರ್ಟ್‌ಮೆಂಟ್ ಬಾಲ್ಕನಿಯಲ್ಲಿ ತಾಯಿ ಪಿಂಕಿ ನಿಂತಿದ್ದರೆ, ಹೃತಿಕ್ ಟೇಬಲ್ ಪಕ್ಕದ ಖುರ್ಚಿಯಲ್ಲಿ ಕೂತುಕೊಂಡು ಸೆಲ್ಫಿ ತೆಗೆದಿದ್ದರು.

ಇನ್ನು ಮುಂಬೈನ ಜುಹುದಲ್ಲಿರುವ ಅಪಾರ್ಟ್‌ಮೆಂಟ್‌ಗೆ ಪ್ರತಿ ತಿಂಗಳು 8.2 ಲಕ್ಷ ರೂ. ಬಾಡಿಗೆ ಕಟ್ಟುತ್ತಾರೆ ಎಂದು ಇದೀಗ ತಿಳಿದು ಬಂದಿದೆ. ಆದರೆ, ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ ಹೃತಿಕ್ ಅವರು ಮುಂಬೈನಲ್ಲಿ 97.5 ಕೋಟಿ ರೂ. ಮೌಲ್ಯದ ಹೊಸ ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.