ಹೈದರಾಬಾದ್ (ತೆಲಂಗಾಣ): ಕ್ರಿಕೆಟ್ ದಂತಕಥೆ ಹಾಗೂ ಟೀಂ ಇಂಡಿಯಾದ ಮಾಜಿ ಆಟಗಾರ ಕಪಿಲ್ ದೇವ್ ಅವರ ಜೀವನಾಧಾರಿತ 83 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಪಿಲ್ ದೇವ್ ಮಾಡಿದ ಸಾಧನೆಯನ್ನು ಪರದೆ ಮೇಲೆ ನಿರ್ದೇಶಕ ಕಬೀರ್ ಖಾನ್ ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ಇನ್ನು ಕಪಿಲ್ದೇವ್ ಅವರ ಪಾತ್ರಕ್ಕೆ ಜೀವ ತುಂಬಿದ ನಟ ರಣವೀರ್ ಸಿಂಗ್ ಅವರನ್ನು ಇಡೀ ಬಾಲಿವುಡ್ ಬಳಗ ಇದೀಗ ಪ್ರಶಂಸಿಸುತ್ತಿದೆ. ಆದರೆ, ಈ ನಡುವೆ ಸಣ್ಣ ಪ್ರಮಾದವೊಂದು ನಡೆದಿದ್ದು ಚಿತ್ರದ ಬಗ್ಗೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.
![How Arjun Kapoor lost 83 to Ranveer Singh](https://etvbharatimages.akamaized.net/etvbharat/prod-images/ranveerdeepika-burn-the-dance-floor-at-83-after-party_2312a_1640262291_356.jpg)
83 ಚಿತ್ರತಂಡದ ಜೊತೆಗೆ ನಿನ್ನೆ ರಾತ್ರಿ ಮುಂಬೈನಲ್ಲಿ ಪ್ರೀಮಿಯರ್ ಶೋ ವೀಕ್ಷಣೆ ಮಾಡಿದ ಬಾಲಿವುಡ್ನ ನಟ - ನಟಿಯರು ಸಾಮಾಜಿಕ ಜಾಲತಾಣದಲ್ಲಿ ರಣವೀರ್ ಸಿಂಗ್ ಹಾಗೂ ಕೆಲವೇ ದೃಶ್ಯಗಳಲ್ಲಿ ಮಿಂಚಿ ಮರೆಯಾಗುವ ದೀಪಿಕಾ ಪಡುಕೋಣೆ ಅವರ ಅದ್ಭುತ ನಟನೆಯನ್ನು ಕೊಂಡಾಡಿ ಬರೆದುಕೊಂಡಿದ್ದಾರೆ. ಆದರೆ, ರಣವೀರ್ ಸಿಂಗ್ ಅವರೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿದ್ದ ಅರ್ಜುನ್ ಕಪೂರ್ ಮಾತ್ರ ಈ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ, ಏಕೆ ಅನ್ನೋದು ಇದೀಗ ಚರ್ಚೆಯ ವಿಷಯವಾಗಿದೆ.
ಇದಕ್ಕೆ ಕಾರಣ ಏನಿರಬಹುದು?
83 ಸಿನಿಮಾದಲ್ಲಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಯಾರೆಂದು ಕೆಲವರಿಗೆ ಗೊತ್ತಿರಬಹುದು. ಆದರೆ, ಹಲವರಿಗೆ ಈ ಬಗ್ಗೆ ಗೊತ್ತಿರಲಿಕ್ಕಿಲ್ಲ. ಇದೇ ವಿಷಯ ಇದೀಗ ಜಾಲತಾಣದಲ್ಲಿ ಚರ್ಚೆ ಗ್ರಾಸವಾಗುತ್ತಿದ್ದು, ಕೆಲವರು ಈ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
![How Arjun Kapoor lost 83 to Ranveer Singh](https://etvbharatimages.akamaized.net/etvbharat/prod-images/982658239a46f5feafa10e71b36614fb_2212a_1640147331_230.jpg)
ಚಿತ್ರದಲ್ಲಿ ರೋಮಿ ದೇವ್ ಆಗಿ ಕಾಣಿಸಿಕೊಂಡಿರುವ ನಟ ರಣವೀರ್ ಸಿಂಗ್ ಅವರ ಬದಲಾಗಿ ಅರ್ಜುನ್ ಕಪೂರ್ ಅವರನ್ನೇ ನಾಯಕ ನಟನನ್ನಾಗಿ ಮಾಡಬೇಕಿತ್ತು ಎಂಬಿತ್ಯಾತಿ ಅಭಿಪ್ರಾಯವನ್ನು ಇಟ್ಟಿದ್ದಾರೆ. ಈ ವಿಷಯ ಇದೀಗ ಮುನ್ನೆಲೆಗೆ ಬರಲು ಬಲವಾದ ಕಾರಣವೂ ಇದೆ.
83 ಸಿನಿಮಾದಲ್ಲಿ ದೇವ್ ಅವರ ಪಾತ್ರಕ್ಕೆ ಮೊದಲು ಅರ್ಜುನ್ ಅವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ, ಕಾರಣಾಂತರದಿಂದ ಅವರ ಬದಲಿಗೆ ರಣವೀರ್ ಸಿಂಗ್ ಚಿತ್ರಕ್ಕೆ ಆಯ್ಕೆ ಮಾಡಲಾಯಿತಂತೆ. ಈ ಮುನಿಸೇ ಅರ್ಜುನ್ ಅವರನ್ನು ಇಂದಿಗೂ ಕಾಡುತ್ತಿದ್ದು, ಇದೇ ಕಾರಣದಿಂದ ಪ್ರೀಮಿಯರ್ ಶೋ ವೀಕ್ಷಣೆಗೆ ಅವರು ಹಾಜರಾಗಲಿಲ್ಲ ಎನ್ನಲಾಗುತ್ತಿದೆ.
ಸಿನಿಮಾ ಸೆಟ್ಟೇರಿದ್ದು ಯಾವಾಗ:
ವರದಿಗಳ ಪ್ರಕಾರ, 2014ರಲ್ಲಿ ನಿರ್ಮಾಪಕ ವಿಷ್ಣುವರ್ಧನ್ ಇಂದೂರಿ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ಬರಹಗಾರ-ನಿರ್ದೇಶಕ ಸಂಜಯ್ ಪುರಣ್ ಸಿಂಗ್ ಚೌಹಾಣ್ ಇಬ್ಬರು ಸೇರಿಕೊಂಡು ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದ್ದರಂತೆ. ಕಪಿಲ್ ದೇವ್ ಪಾತ್ರಕ್ಕೆ ಅರ್ಜುನ್ ಕಪೂರ್ ಅವರನ್ನು ಆಯ್ಕೆ ಸಹ ಮಾಡಿಕೊಂಡಿದ್ದರಂತೆ.
- " class="align-text-top noRightClick twitterSection" data="">
ಆದರೆ, ಕಾರಣಾಂತರಗಳಿಂದ 2017ರಲ್ಲಿ ಸಂಜಯ್ ಪುರಣ್ ಸಿಂಗ್ ಚೌಹಾಣ್ ಬದಲಿಗೆ ಕಬೀರ್ ಖಾನ್ ಚಿತ್ರದ ನಿರ್ದೇಶನ ಹೊರೆ ಹೊತ್ತಿದ್ದರಿಂದ ಅರ್ಜುನ್ ಕಪೂರ್ ಚಿತ್ರದಿಂದ ಹೊರಬರಲು ಕಾರಣವಾಯಿತು ಎಂದು ಹೇಳಲಾಗುತ್ತಿದೆ. ಕ್ರಿಕೆಟ್ ತರಬೇತಿ ಸೇರಿದಂತೆ ಚಿತ್ರಕ್ಕೆ ಅರ್ಜುನ್ ಕಪೂರ್ ಭರ್ಜರಿ ತಯಾರಿ ಸಹ ಮಾಡಿಕೊಂಡಿದ್ದರಂತೆ.
ಆದರೆ, ಕಬೀರ್ ಖಾನ್ ಅವರು ರಣವೀರ್ ಅವರನ್ನು ಕಪಿಲ್ ದೇವ್ ಆಗಿ ತೋರಿಸಲು ಉತ್ಸುಕರಾಗಿದ್ದರಂತೆ. ಇದನ್ನು ಅರಿತುಕೊಂಡ ಅರ್ಜುನ್ ಕಪೂರ್ ತಕ್ಷಣ ರಣವೀರ್ ಸಿಂಗ್ ಅವರನ್ನು ಸಂಪರ್ಕಿಸಿದ್ದಲ್ಲದೇ ಒಪ್ಪಿಗೆ ಸೂಚಿಸದಂತೆ ಕೇಳಿಕೊಂಡಿದ್ದರಂತೆ. ಆದರೆ, ಕೆಲವು ಬೆಳವಣಿಗೆ ಬಳಿಕ ಯಾವುದೇ ಪ್ರಯೋಜನವಾಗಲಿಲ್ಲ ಅನ್ನೋದು ಇತಿಹಾಸ.
![How Arjun Kapoor lost 83 to Ranveer Singh](https://etvbharatimages.akamaized.net/etvbharat/prod-images/13996770_945_13996770_1640329204016.png)
ಇದನ್ನೂ ಓದಿ: ಚಂದಾದಾರರ ಕರೆ, ಇಂಟರ್ನೆಟ್ ಬಳಕೆ ದಾಖಲೆ ಎರಡು ವರ್ಷದವರೆಗೆ ಸಂಗ್ರಹಕ್ಕೆ ಟೆಲಿಕಾಂ ಕಂಪನಿಗಳಿಗೆ ಸರ್ಕಾರ ಸೂಚನೆ