ಪಾಟ್ನಾ: ಜೂನ್ 14ರಂದು ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಸಿಬಿಐ ವಿಚಾರಣೆಗೆ ಒಳಪಡಿಸುವ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ.
ಟ್ವಿಟ್ಟರ್ ಖಾತೆಯಲ್ಲಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್, ಸುಶಾಂತ್ ಸಾವಿನ ವಿಚಾರಣೆಯನ್ನು ಸಿಬಿಐಗೆ ಒಪ್ಪಿಸುವ ಮೂಲಕ ತಮ್ಮ ಮಗನಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್, ಇಂದು ನನ್ನ ಮಗ ಸುಶಾಂತ್ ಆತ್ಮವು ಅಳುತ್ತಿದೆ. ಸಿಬಿಐ ತನಿಖೆಗೆ ಒತ್ತಾಯಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
-
आज मेरे बेटे सुशांत की आत्मा रो रही है।
— K.K Singh (@K_KSingh_) July 4, 2020 " class="align-text-top noRightClick twitterSection" data="
और CBI जांच की मांग कर रही है।😥😥
">आज मेरे बेटे सुशांत की आत्मा रो रही है।
— K.K Singh (@K_KSingh_) July 4, 2020
और CBI जांच की मांग कर रही है।😥😥आज मेरे बेटे सुशांत की आत्मा रो रही है।
— K.K Singh (@K_KSingh_) July 4, 2020
और CBI जांच की मांग कर रही है।😥😥
ಮತ್ತೊಂದು ಟ್ವೀಟ್ನಲ್ಲಿ, ನನ್ನ ಮಗ ಸುಶಾಂತ್ ಸಿಂಗ್ ರಜಪೂತ್ ತುಂಬಾ ಧೈರ್ಯಶಾಲಿ. ಅವನು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಇದು ಕೊಲೆಯಾದರೂ ಆತ್ಮಹತ್ಯೆ ಎಂದು ಸಾಬೀತುಪಡಿಸುವ ಪ್ರಯತ್ನ ನಡೆಯುತ್ತಿದೆ. ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರು ಜೂನ್ 14 ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಂದಿನಿಂದ, ಅವರ ಸಾವಿನ ಬಗ್ಗೆ ಸಿಬಿಐ ತನಿಖೆಗೆ ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಘಟನೆಗಳು ಒತ್ತಾಯಿಸುತ್ತಿವೆ.
ರಜಪೂತ್ ಅವರ ಮರಣೋತ್ತರ ವರದಿಯು ಅವರ ಸಾವು "ಆತ್ಮಹತ್ಯೆಯ ಸ್ಪಷ್ಟ ಪ್ರಕರಣ" ಎಂದು ಹೇಳುತ್ತದೆ. ಆದಾಗ್ಯೂ, #BreakTheSilenceForSushant ಎಂಬ ಹ್ಯಾಶ್‌ಟ್ಯಾಗ್ ಶುಕ್ರವಾರ ಪೂರ್ತಿ ಟ್ವಿಟರ್‌ನಲ್ಲಿ ಪ್ರಚಲಿತದಲ್ಲಿತ್ತು. ಅನೇಕ ಅಭಿಮಾನಿಗಳು ಈ ಮೂಲಕ ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಒತ್ತಾಯಿಸಿದ್ದಾರೆ.