ETV Bharat / sitara

ಕಂಗನಾಗೆ ಅವಹೇಳನಕಾರಿಯಾಗಿ ನಿಂದನೆ ಆರೋಪ: ರಾವತ್​ ವಿರುದ್ಧ ಹಿಮಾಚಲ ಪ್ರದೇಶ ಬಿಜೆಪಿ ದೂರು

ಶಿವಸೇನೆ ಸಂಸದ ಸಂಜಯ್​ ರಾವತ್​ ವಿರುದ್ಧ ಹಿಮಾಚಲ ಪ್ರದೇಶದ ಬಿಜೆಪಿ ಐಟಿ ಘಟಕ ಶಿಮ್ಲಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದೆ. ಐಪಿಸಿ ಸೆಕ್ಷನ್ 294 ಮತ್ತು 509 ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದೆ.

complaint against Shiv Sena MP Sanjay Raut
ರಾವತ್​ ವಿರುದ್ಧ ಹಿಮಾಚಲ ಪ್ರದೇಶ ಬಿಜೆಪಿ ದೂರು
author img

By

Published : Sep 13, 2020, 12:52 PM IST

ಶಿಮ್ಲಾ (ಹಿಮಾಚಲ ಪ್ರದೇಶ): ನಟಿ ಕಂಗನಾ ರಣಾವತ್​ರನ್ನು ಅವಹೇಳನಕಾರಿ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಶಿವಸೇನೆ ಸಂಸದ ಸಂಜಯ್​ ರಾವತ್​ ವಿರುದ್ಧ ಹಿಮಾಚಲ ಪ್ರದೇಶದ ಬಿಜೆಪಿ ಐಟಿ ಘಟಕ ಶಿಮ್ಲಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದೆ.

ಸಂಜಯ್​ ರಾವತ್​ ಬಳಸಿರುವ ಭಾಷೆ ಅಸಂವಿಧಾನಿಕವಾಗಿದ್ದು, ನಟಿಯನ್ನು ನಿಂದಿಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು ಸಂಸದನ ವಿರುದ್ಧ ಐಪಿಸಿ ಸೆಕ್ಷನ್ 294 ಮತ್ತು 509 ರ ಅಡಿಯಲ್ಲಿ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.

ಮುಂಬೈಯನ್ನ ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಕಂಗನಾ ವಿರುದ್ಧ ರಾವತ್​ ಹೇಳಿಕೆಗಳನ್ನು ನೀಡಿದ್ದರು. ಮಹಾರಾಷ್ಟ್ರ ಜನತೆ ಬಳಿ ಕಂಗನಾ ಕ್ಷಮೆಯಾಚಿಸಿದರೆ ನಾನು ಕಂಗನಾ ಬಳಿ ಕ್ಷಮೆ ಕೇಳುವೆ ಎಂದು ಸಂಜಯ್​ ರಾವತ್ ಹೇಳಿದ್ದರು.

ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ವಿಚಾರ, ಡ್ರಗ್ಸ್​​ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರಣಾವತ್​ಗೆ ಜೀವ ಬೆದರಿಕೆಯಿದ್ದು, ಕೇಂದ್ರ ಸರ್ಕಾರ ‘Y’ ಪ್ಲಸ್ ಲೆವೆಲ್​ ಭದ್ರತೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.