ETV Bharat / sitara

ದೊಡ್ಡ ಪರದೆಯ ಮೇಲೆ ಪ್ರಭಾಸ್​ ಜೊತೆ ನಟಿಸಲಿದ್ದಾರೆ ಬಾಲಿವುಡ್​ನ ಸೂಪರ್​​ ಸ್ಟಾರ್​ಗಳು ! - ನಾಗ್ ಅಶ್ವಿನ್ ಅವರ ಇನ್ನೂ ಹೆಸರಿಡದ ಚಿತ್ರದ ಪೂರ್ವ- ನಿರ್ಮಾಣ ಕಾರ್ಯ

ನಾಗ್ ಅಶ್ವಿನ್ ಅವರ ಇನ್ನೂ ಹೆಸರಿಡದ ಚಿತ್ರದ ಪೂರ್ವ ಸಿದ್ಧತಾ ಕಾರ್ಯ ಭರದಿಂದ ಸಾಗಿದ್ದು, ತೆಲುಗು ಸೂಪರ್ ಸ್ಟಾರ್ ಪ್ರಭಾಸ್ ಅವರೊಂದಿಗೆ ಬಾಲಿವುಡ್ ಐಕಾನ್ ಅಮಿತಾಬ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಅಭಿನಯಿಸಲಿದ್ದಾರೆ. 2022 ರಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಪ್ರಸ್ತುತ ಪೂರ್ವ ನಿರ್ಮಾಣ ಹಂತದಲ್ಲಿದೆ.

Here's when Prabhas, Big B and Deepika
ಪ್ರಭಾಸ್​ ಜೊತೆ ನಟಿಸಲಿದ್ದಾರೆ ಬಾಲಿವುಡ್​ನ ಸೂಪರ್​​ ಸ್ಟಾರ್​ಗಳು
author img

By

Published : Feb 28, 2021, 4:30 PM IST

ಹೈದರಾಬಾದ್: ಬಾಲಿವುಡ್​ನ ಸೂಪರ್​​ ಸ್ಟಾರ್​ಗಳಾದ ಅಮಿತಾಬ್​ ಬಚ್ಚನ್​ ಮತ್ತು ದೀಪಿಕಾ ಪಡುಕೋಣೆ ತೆಲುಗು ಸೂಪರ್​​ ಸ್ಟಾರ್​ ಪ್ರಭಾಸ್​ ಅವರೊಂದಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೆಸರಿಡದ ಸಿನಿಮಾದ ಪೂರ್ವ- ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶ್ರೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಭಾರತದ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್ ಅಡಿಯಲ್ಲಿ ಬಹುಭಾಷಾ ಚಿತ್ರವು, ಪ್ರಭಾಸ್, ಬಿಗ್ ಬಿ ಮತ್ತು ದೀಪಿಕಾ ಅವರ ನಟನೆಯಲ್ಲಿ ಹೊರಬರಲಿದೆ. ಈ ಇಬ್ಬರು ಬಾಲಿವುಡ್ ತಾರೆಯರು ಈ ಹಿಂದೆ 'ಆರಕ್ಷನ್' ಮತ್ತು 'ಪಿಕು' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಓದಿ:ವೆಬ್ ಸೀರೀಸ್ ಆಗಿ ಬರಲಿದೆ ಮಾಜಿ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್​​​​​ ಕಥೆ...!

ಸ್ಕ್ರಿಪ್ಟ್ ಮತ್ತು ಲಾಜಿಸ್ಟಿಕ್ಸ್‌ನ ಕಾರ್ಯ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಈ ಕೆಲಸ ಮುಗಿಯಲಿದೆ ಎಂದು ನಾಗ್​ ಅಶ್ವಿನ್​ ಹೇಳಿದ್ದಾರೆ. ಈ ಸಿನಿಮಾಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ನಾಗ್​ ಅಶ್ವಿನ್​​ ಎಲ್ಲಾ ಪ್ರಮುಖ ತಾರೆಯರೊಂದಿಗೆ ಪ್ರತ್ಯೇಕವಾಗಿ ಮಾತುಕತೆಯನ್ನು ಕೂಡ ನಡೆಸಿದ್ದಾರೆ. ಇತ್ತೀಚೆಗೆ ನಡೆದ ವಾಹಿನಿಯೊಂದರ ಸಂದರ್ಶನದಲ್ಲಿ ಅಶ್ವಿನ್​ ಅವರು ಪೂರ್ವ ನಿರ್ಮಾಣವು ಬಹಳ ಸಮಯದಿಂದ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವರ್ಷದ ಜೂನ್​ ಅಥವಾ ಜುಲೈನಿಂದ ಸಿನಿಮಾ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಯೋಜನೆಯ ಬಗ್ಗೆ ಮಾತನಾಡುತ್ತಾ ನಾಗ್ ಅಶ್ವಿನ್ ಅವರು ದೀಪಿಕಾ ಅವರು ಈ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ತುಂಬಾ ಉತ್ಸುಕನಾಗಿದ್ದೇನೆ. ಏಕೆಂದರೆ ಈ ಪಾತ್ರ ಹಿಂದೆ ಅವರು ಮಾಡಿರುವ ಎಲ್ಲಾ ಪಾತ್ರಗಳಿಗಿಂತ ಭಿನ್ನವಾಗಿದೆ. ದೀಪಿಕಾ ಮತ್ತು ಪ್ರಭಾಸ್​ ಜೋಡಿಯ ಅಭಿನಯವೂ ಅಭಿಮಾನಿಗಳಲ್ಲಿ ಅಶ್ಚರ್ಯವನ್ನುಂಟು ಮಾಡಲಿದೆ ಎಂದು ನಾಗ್​ ಅಶ್ವಿನ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.