ಇಂದು ಬಾಲಿವುಡ್ ನಟ, ನೃತ್ಯಪಟು, ಮಾರ್ಷಲ್ ಆರ್ಟ್ಸ್ ಪರಿಣತಿ ಹೊಂದಿದ ಟೈಗರ್ ಶ್ರಾಫ್ಗೆ 31 ನೇ ಹುಟ್ಟುಹಬ್ಬದ ಸಂಭ್ರಮ. ತಂದೆ ಜಾಕಿ ಶ್ರಾಫ್, ತಾಯಿ ಆಯೆಷಾ ಶ್ರಾಫ್ ಮತ್ತು ಸಹೋದರಿ ಕೃಷ್ಣ ಶ್ರಾಫ್ ಜೊತೆ ಕಳೆದಿದ್ದು, ಇನ್ನಷ್ಟು ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಶ್ರಾಫ್ ಮೂಲ ಹೆಸರು ಜೈ ಹೇಮಂತ್. ಹೀರೋಪಂತಿ ಸಿನಿಮಾ ಮೂಲಕ ಬಾಲಿವುಡ್ಗೆ ಎಂಟ್ರಿಕೊಟ್ಟ ಟೈಗರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ, ಇವರ ನೃತ್ಯ ಮತ್ತು ಮಾರ್ಷಲ್ ಆರ್ಟ್ಸ್ಗೆ ಮನಸೋಲದವರಿಲ್ಲ.
- " class="align-text-top noRightClick twitterSection" data="
">
ಸದ್ಯ ಶ್ರಾಫ್ ತಮ್ಮ ಹುಟ್ಟುಹಬ್ಬದ ದಿನದಂದು ಬಾಲ್ಯದ ಅಪರೂಪದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನು ತಾಯಿ ಆಯೆಷಾ ಸಹ ಟೈಗರ್ ಬಾಲ್ಯದ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. "ಕರುಣಾಮಯಿ, ಸೌಮ್ಯ, ಅತ್ಯಂತ ಸಕಾರಾತ್ಮಕ, ಕಠಿಣ ಪರಿಶ್ರಮಿಗೆ ಹುಟ್ಟುಹಬ್ಬದ ಶುಭಾಶಯಗಳು - ದೇವರು ಯಾವಾಗಲೂ ನನ್ನ ಮಗನನ್ನು ಆಶೀರ್ವದಿಸಲಿ" ಎಂದು ಹಾರೈಸಿದ್ದಾರೆ.