ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ 2 ತಿಂಗಳು ಕಳೆದಿವೆ. ಜೂನ್ 14 ರಿಂದ ಇಂದಿನವರೆಗೆ ಸುಶಾಂತ್ ಪ್ರಕರಣದ ಬಗ್ಗೆ ಪ್ರತಿದಿನ ಚರ್ಚೆಯಾಗುತ್ತಲೇ ಇದೆ. ಒಂದೆಡೆ ಸ್ವಜನಪಕ್ಷಪಾತದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯ ಕೇಳಿಬರುತ್ತಿದೆ.
- " class="align-text-top noRightClick twitterSection" data="
">
ನಾಳೆ 74ನೇ ಸ್ವಾತಂತ್ರ್ಯ ದಿನಾಚರಣೆ ಇದ್ದು ಸುಶಾಂತ್ ಅಭಿಮಾನಿಗಳು ಎಲ್ಲರೂ ಒಗ್ಗೂಡಿ ಪ್ರಾರ್ಥನೆ ಸಲ್ಲಿಸುವಂತೆ ಸುಶಾಂತ್ ಸಹೋದರಿ ಶ್ವೇತಾಸಿಂಗ್ ಕೀರ್ತಿ ಮನವಿ ಸಲ್ಲಿಸಿದ್ದಾರೆ. ಸುಶಾಂತ್ 2ನೇ ತಿಂಗಳ ಪುಣ್ಯತಿಥಿಯಂದು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಶ್ವೇತಾ ಸಿಂಗ್ ಈ ಮನವಿ ಮಾಡಿದ್ದಾರೆ. 'ನೀನು ನಮ್ಮನ್ನು ಅಗಲಿ 2 ತಿಂಗಳು ಕಳೆದಿವೆ. ಆದರೆ ಆ ದಿನ ಏನು ನಡೆಯಿತು ಎಂಬ ಸತ್ಯಸಂಗತಿ ತಿಳಿಯಲು ಇಂದಿಗೂ ನಾವು ಹೋರಾಡುತ್ತಲೇ ಇದ್ದೇವೆ. ಆದ್ದರಿಂದ ನಾನು ಎಲ್ಲರಲ್ಲೂ ಮನವಿ ಮಾಡುವುದೊಂದೇ, ನಾಳೆ ಬೆಳಗ್ಗೆ 10 ರಿಂದ ದಿನಪೂರ್ತಿ ಸುಶಾಂತ್ಗಾಗಿ ಏರ್ಪಡಿಸಲಾಗಿರುವ ಪ್ರಾರ್ಥನೆ ಹಾಗೂ ಆಧ್ಯಾತ್ಮ ಕಾರ್ಯಕ್ರಮದಲ್ಲಿ ನೀವೂ ಕೂಡಾ ನಮ್ಮೊಂದಿಗೆ ಕೈ ಜೋಡಿಸಿ ಎಂದು ಶ್ವೇತಾ ಮನವಿ ಮಾಡಿದ್ದಾರೆ.
- " class="align-text-top noRightClick twitterSection" data="
">
ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೂಡಾ ನಿನ್ನೆ ಸುಶಾಂತ್ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಮನವಿ ಮಾಡಿದ್ದರು. ಇಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸುಶಾಂತ್ ಸಿಂಗ್ಗಾಗಿ ಈ ಜಾಗತಿಕ ಪ್ರಾರ್ಥನೆಯಲ್ಲಿ ನೀವೆಲ್ಲರೂ ಭಾಗಿಯಾಗಬೇಕು ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಕಂಗನಾ ರಣಾವತ್, ಕೃತಿ ಸನನ್, ವರುಣ್ ಧವನ್, ಪರಿಣಿತಿ ಛೋಪ್ರಾ, ಸಿದ್ದಾರ್ಥ್ ಚತುರ್ವೇದಿ, ಜಹ್ರೀನ್ ಖಾನ್ ಸೇರಿದಂತೆ ಅನೇಕ ಬಾಲಿವುಡ್ ನಟ-ನಟಿಯರು ಕೂಡಾ ಸುಶಾಂತ್ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಮನವಿ ಮಾಡುವ ಮೂಲಕ ಸುಶಾಂತ್ ಕುಟುಂಬಕ್ಕೆ ಬೆಂಬಲ ಸೂಚಿಸಿದ್ದಾರೆ.