ETV Bharat / sitara

ಬಾಲಿವುಡ್​ ಅಂಗಳದಲ್ಲಿ ಸರಳವಾಗಿ ನೆರವೇರಿತು ಗಣಪನ ನಿಮಜ್ಜನ - ಶ್ರದ್ಧಾ ಕಪೂರ್

ಬಾಲಿವುಟ್ ನಟ, ನಟಿಮಣಿಯರ ಮನೆಗಳಲ್ಲಿ ಗಣಪ ಮೂರ್ತಿ ಪ್ರತಿಷ್ಠಾಪಿಸಿ ನಿಮಜ್ಜನ ಮಾಡಲಾಗಿದೆ. ನಟ ಶಾರುಖ್ ಖಾನ್, ಶ್ರದ್ಧಾ ಕಪೂರ್ ಹಾಗೂ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣಪನ ಆರಾಧನೆ ಮಾಡಲಾಗಿದೆ. ಅಲ್ಲದೆ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಿ ನಿಮಜ್ಜನ ನೆರವೇರಿಸಿದ್ದಾರೆ.

Ganpati Visarjan: SRK, Shilpa Shetty, Shraddha Kapoor bid adieu to Bappa
ಬಾಲಿವುಡ್​ ಅಂಗಳದಲ್ಲಿ ಸೆರಳವಾಗಿ ನೆರವೇರಿತು ಗಣಪನ ನಿಮಜ್ಜನ
author img

By

Published : Aug 24, 2020, 11:16 AM IST

ಮುಂಬೈ: ಈ ವರ್ಷದ ಗಣೇಶೋತ್ಸವ ಹೆಚ್ಚಿನ ಸಂಭ್ರಮದಿಂದ ಕೂಡಿರದೆ ಸರಳವಾಗಿ ನೆರವೇರಿದೆ. ಬಾಲಿವುಡ್ ಅಂಗಳದಲ್ಲೂ ವಿಘ್ನ ನಿವಾರಕನ ಹಬ್ಬವನ್ನು ಆಚರಿಸಲಾಗಿದೆ.

ಬಾಲಿವುಟ್ ನಟ, ನಟಿಮಣಿಯರ ಮನೆಗಳಲ್ಲಿ ಗಣಪ ಮೂರ್ತಿ ಪ್ರತಿಷ್ಠಾಪಿಸಿ ನಿಮಜ್ಜನ ಮಾಡಲಾಗಿದೆ. ನಟ​ ಶಾರುಖ್ ಖಾನ್ ಭಾನುವಾರ ಸರ್ಕಾರಿ ನಿಯಮಾವಳಿಯಂತೆ ಗಣಪನ ನಿಮಜ್ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಟಿ ಶಿಲ್ಪಾ ಶೆಟ್ಟಿ ಮತ್ತು ಶ್ರದ್ಧಾ ಕಪೂರ್ ಸಹ ಗಣಪನ ನಿಮಜ್ಜನ ನೆರವೇರಿಸಿ ತಮ್ಮ ಇನ್ಸ್​ಸ್ಟಾಗ್ರಾಂ​​ನಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿದ್ದಾರೆ.

ಶಾರುಖ್ ಕಪ್ಪು-ಬಿಳುಪಿನ ಸೆಲ್ಫಿಯೊಂದನ್ನು ಟ್ವಿಟರ್​​​​ನಲ್ಲಿ ಶೇರ್ ಮಾಡಿದ್ದು, ತಮ್ಮ ಅಭಿಮಾನಿಗಳಿಗೆ ಶುಭ ಹಾರೈಸಿದ್ದಾರೆ. ‘ಗಣಪನ ಪ್ರಾರ್ಥನೆ ಹಾಗೂ ನಿಮಜ್ಜನ ನೆರವೇರಿಸಲಾಗಿದೆ. ಗಣಪ ನಿಮ್ಮ ಹಾಗೂ ನಿಮ್ಮ ಕುಟುಂಬಸ್ಥರಿಗೆ ಒಳಿತು ಮಾಡಲಿ,... ಗಣಪತಿ ಬಪ್ಪಾ ಮೋರಯಾ’ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಶ್ರದ್ಧಾ ಕಪೂರ್​ ಪರಿಸರ ಸ್ನೇಹಿ ಗಣಪನ ಮೂರ್ತಿ ಪ್ರತಿಷ್ಠಾಪಿಸಿ ಮನೆಯಲ್ಲಿಯೇ ನಿಮಜ್ಜನ ಮಾಡಿದ್ದಾರೆ. ಪುಟ್ಟ ಗಾತ್ರದ ಪರಿಸರ ಸ್ನೇಹಿ ಗಣಪನನ್ನು ಮನೆಯಲ್ಲಿನ ದೊಡ್ಡ ಬಕೆಟ್​​ಗೆ ನೀರು ತುಂಬಿಸಿ ನಿಮಜ್ಜನ ನೆರವೇರಿಸಿದ್ದಾರೆ.

  • 🌺🙏🏻‘गणपति बाप्पा मोरिया, अगले बरस तू जल्दी आ’🙏🏻🌺
    Saying goodbye is always the hardest, especially when Gannu Raja is on His way home🙏🏻 Although it’s a rather quiet farewell this year... we’re sending Him only with a promise that He’ll be back next year with better times ❤️🙏🏻❤️ pic.twitter.com/5f8PkbEDnw

    — SHILPA SHETTY KUNDRA (@TheShilpaShetty) August 23, 2020 " class="align-text-top noRightClick twitterSection" data=" ">

ಇವರಂತೆಯೇ ಶಿಲ್ಪಾ ಶೆಟ್ಟಿ ಹಾಗೂ ಅವರ ಕುಟುಂಬ ಸಹ ನಿಮಜ್ಜನ ನೆರವೇರಿಸಿದೆ. ಆದರೆ ಶಿಲ್ಪಾ ಶೆಟ್ಟಿ ಮನೆಯಲ್ಲಿ ಗಣಪನ ಮುಂದೆ ವಿವಿಧ ರೀತಿಯ ಸಿಹಿ ತಿನಿಸುಗಳು ಸೇರಿ ಕುಟುಂಬಸ್ಥರು ನೃತ್ಯ ಮಾಡಿ ಗಣಪನ ನಿಮಜ್ಜನದಲ್ಲಿ ಪಾಲ್ಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.