ಮುಂಬೈ (ಮಹಾರಾಷ್ಟ್ರ): ಬಿಡುಗಡೆಯಾದ ದಿನದಿಂದಲೂ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಚಿತ್ರ ರಿಲೀಸ್ ಆಗಿ ಮೂರನೇ ದಿನವಾದ ಭಾನುವಾರ ಬರೋಬ್ಬರಿ 15.3 ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಹಾಗೂ ನಟಿ ಆಲಿಯಾ ಭಟ್ ನಟನೆಯಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೇಶ್ಯೆ ಪಾತ್ರದಲ್ಲಿ ಆಲಿಯಾ ಭಟ್ ಅದ್ಭುತ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
-
CHAND KA SHUKRIYA 🙏
— BhansaliProductions (@bhansali_produc) February 28, 2022 " class="align-text-top noRightClick twitterSection" data="
THANK YOU FOR ALL THE LOVE🤍
BOOK TICKETS NOW: https://t.co/NpIKjDCRN1#GangubaiKathiawadi, IN CINEMAS NOW#SanjayLeelaBhansali @aliaa08 @ajaydevgn @shantanum07 @prerna982 @jayantilalgada @PenMovies @saregamaglobal pic.twitter.com/z4hnCEP93q
">CHAND KA SHUKRIYA 🙏
— BhansaliProductions (@bhansali_produc) February 28, 2022
THANK YOU FOR ALL THE LOVE🤍
BOOK TICKETS NOW: https://t.co/NpIKjDCRN1#GangubaiKathiawadi, IN CINEMAS NOW#SanjayLeelaBhansali @aliaa08 @ajaydevgn @shantanum07 @prerna982 @jayantilalgada @PenMovies @saregamaglobal pic.twitter.com/z4hnCEP93qCHAND KA SHUKRIYA 🙏
— BhansaliProductions (@bhansali_produc) February 28, 2022
THANK YOU FOR ALL THE LOVE🤍
BOOK TICKETS NOW: https://t.co/NpIKjDCRN1#GangubaiKathiawadi, IN CINEMAS NOW#SanjayLeelaBhansali @aliaa08 @ajaydevgn @shantanum07 @prerna982 @jayantilalgada @PenMovies @saregamaglobal pic.twitter.com/z4hnCEP93q
ಫೆಬ್ರವರಿ 25ರಂದು ಚಿತ್ರ ಬಿಡುಗಡೆಯಾಗಿದ್ದು, ಮೊದಲ ದಿನವೇ 10.5 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 15.3 ಕೋಟಿ ರೂ. ಗಳಿಕೆ ಮಾಡಿತ್ತು. ಒಟ್ಟಾರೆ ಮೂರೇ ದಿನದಲ್ಲಿ 39.12 ಕೋಟಿ ರೂ. ಬಾಚಿಕೊಂಡಿರುವ ವಿಚಾರವನ್ನು ಬನ್ಸಾಲಿ ಪ್ರೊಡಕ್ಷನ್ಸ್ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಬಗ್ಗೆ ಸಮಂತಾ ಏನಂದ್ರು ಗೊತ್ತಾ!?
ಹುಸೇನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಪುಸ್ತಕದ ಅಧ್ಯಾಯಗಳಲ್ಲಿ ಒಂದನ್ನು ಆರಿಸಿ, 1960ರ ದಶಕದ ಕಾಮಾಟಿಪುರದ ವೇಶ್ಯೆ ಗಂಗುಬಾಯಿ ಕೋಠೆವಾಲಿ ಜೀವನದ ಸತ್ಯ ಘಟನೆ ಆಧರಿಸಿ ಈ ಚಿತ್ರವನ್ನು ನಿರ್ದೇಶಿಸಲಾಗಿದೆ. ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.