ETV Bharat / sitara

7 ವರ್ಷಗಳ ಕಠಿಣ ವರ್ಕೌಟ್ ಬಳಿಕ 98 ಕಿಲೋ ತೂಕ ಇಳಿಸಿದ ಗಣೇಶ್ ಆಚಾರ್ಯ..! - Dance Choreographer Ganesh Acharya

7 ವರ್ಷಗಳ ಹಿಂದೆ ವರ್ಕೌಟ್ ಆರಂಭಿಸಿದ ಬಾಲಿವುಡ್ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಇದುವರೆಗೂ 98 ಕಿಲೋ ತೂಕ ಕಳೆದುಕೊಂಡಿದ್ದಾರೆ. ಬಾಲಿವುಡ್ ಖ್ಯಾತ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಗಣೇಶ್ ಆಚಾರ್ಯ ಈ ವಿಚಾರವಾಗಿ ಹೇಳಿಕೊಂಡಿದ್ದಾರೆ.

Ganesh acharya
ಗಣೇಶ್ ಆಚಾರ್ಯ
author img

By

Published : Dec 18, 2020, 11:52 AM IST

ಸುಲಭವಾಗಿ ತೂಕ ಹೆಚ್ಚಿಸಿಕೊಳ್ಳಬಹುದು, ಆದರೆ ತೂಕ ಕಳೆದುಕೊಳ್ಳಲು ನಾನಾ ಕಸರತ್ತು ಮಾಡಲೇಬೇಕು. 2-3 ಕಿಲೋ ಆದರೆ ಒಂದೆರಡು ತಿಂಗಳು ವರ್ಕೌಟ್ ಮಾಡಿ ತೂಕ ಕಳೆದುಕೊಳ್ಳಬಹುದು. ಆದರೆ 98 ಕಿಲೋ ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ ಬಿಡಿ. ಬಾಲಿವುಡ್ ನಟ ಗಣೇಶ್ ಆಚಾರ್ಯ ಇದೀಗ ಬರೋಬ್ಬರಿ 98 ಕಿಲೋ ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ. ಗಣೇಶ್ ಆಚಾರ್ಯ ಹೊಸ ಫೋಟೋ ನೋಡಿದವರು ವಾಹ್ ಗಣೇಶ್​..ಎನ್ನುತ್ತಿದ್ದಾರೆ.

Ganesh acharya
ಗಣೇಶ್ ಆಚಾರ್ಯ

ಬಾಲಿವುಡ್​​ನಲ್ಲಿ ಆಲಿಯಾ ಭಟ್, ಕರೀನಾ ಕಪೂರ್, ಅರ್ಜುನ್ ಕಪೂರ್, ಸೋನಾಕ್ಷಿ ಸಿನ್ಹಾ, ಸಾರಾ ಅಲಿ ಖಾನ್, ಗಾಯಕ ಅದ್ನಾನ್ ಸಾಮಿ ಸೇರಿದಂತೆ ಅನೇಕ ನಟ-ನಟಿಯರು ಇದಕ್ಕೂ ಮುನ್ನ ಬಹಳ ದಪ್ಪ ಇದ್ದರು. ಆದರೆ ನಂತರ ಆರೋಗ್ಯ ಹಾಗೂ ಕರಿಯರ್ ದೃಷ್ಟಿಯಿಂದ ಇವರೆಲ್ಲಾ ಸಖತ್ ವರ್ಕೌಟ್ ಮಾಡಿ ತೂಕ ಇಳಿಸಿದ್ದರು. ಇದೀಗ ಆ ಗುಂಪಿಗೆ ಗಣೇಶ್ ಆಚಾರ್ಯ ಕೂಡಾ ಸೇರಿದ್ದಾರೆ. ಗಣೇಶ್ ಆಚಾರ್ಯ ಸುಮಾರು 7 ವರ್ಷಗಳ ಹಿಂದಿನಿಂದ ವರ್ಕೌಟ್ ಆರಂಭಿಸಿದ್ದಾರೆ. 2 ವರ್ಷಗಳ ಹಿಂದಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಗಣೇಶ್ ಆಚಾರ್ಯ, ತೂಕ ಇಳಿಸುವುದು ಬಹಳ ಕಷ್ಟದ ಕೆಲಸ, ಬಹಳ ವರ್ಷಗಳಿಂದ ನಾನು ತೂಕ ಇಳಿಸಲು ಪ್ರಯತ್ನಿಸುತ್ತಲೇ ಇದ್ದೇನೆ. 2015 ರಲ್ಲಿ ಚಿತ್ರವೊಂದಕ್ಕಾಗಿ ಸುಮಾರು 30 ಕಿಲೋ ತೂಕ ಇಳಿಸಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಕರೋಡ್​​ ಪತಿ'ಯಾಗುವಲ್ಲಿ ಜಸ್ಟ್​ ಮಿಸ್ಸಾದ ಉಡುಪಿ ವಿದ್ಯಾರ್ಥಿ: ಆದರೂ ಲಕ್ಷಾಧೀಶ್ವರ!!

ಇತ್ತೀಚೆಗೆ ಕಪಿಲ್ ಶರ್ಮ ಶೋನಲ್ಲಿ ಭಾಗವಹಿಸಿದ್ದ ಗಣೇಶ್ ಆಚಾರ್ಯ, ನಾನು ಒಟ್ಟು 200 ಕಿಲೋ ತೂಕ ಇದ್ದೆ. 7 ವರ್ಷಗಳ ಹಿಂದೆ ವರ್ಕೌಟ್ ಆರಂಭಿಸಿದ್ದೆ. ಈ 6 ತಿಂಗಳಿಂದ 18 ಕಿಲೋ ತೂಕ ಇಳಿಸುವ ಮೂಲಕ ಒಟ್ಟು 98 ಕಿಲೋ ತೂಕ ಕಡಿಮೆ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಗಣೇಶ್ ಆಚಾರ್ಯ ಸೋಷಿಯಲ್ ಮೀಡಿಯಾದಲ್ಲಿ ಅವರು ವರ್ಕೌಟ್ ಮಾಡುವ ಸಾಕಷ್ಟು ವಿಡಿಯೋಗಳು ಕಾಣಸಿಗುತ್ತವೆ.

Ganesh acharya
98 ಕಿಲೋ ತೂಕ ಇಳಿಸಿರುವ ಗಣೇಶ್ ಆಚಾರ್ಯ

ಗಣೇಶ್ ಆಚಾರ್ಯ 1992 ರಿಂದ ಹಿಂದಿ ಸಿನಿಮಾಗಳಿಗೆ ಕೊರಿಯೋಗ್ರಫಿ ಮಾಡುತ್ತಾ ಬಂದಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಆ್ಯಕ್ಟಿಂಗ್ ಕೂಡಾ ಮಾಡಿದ್ದಾರೆ. ನಾಲ್ಕು ಸಿನಿಮಾಗಳನ್ನು ಕೂಡಾ ನಿರ್ದೇಶಿಸಿದ್ದಾರೆ. 'ಕೆಜಿಎಫ್​​​​ ಭಾಗ 1' ಹಿಂದಿ ವರ್ಷನ್, ಕಳೆದ ವರ್ಷ ಬಿಡುಗಡೆಯಾದ 'ಪೈಲ್ವಾನ್' ಚಿತ್ರಕ್ಕೆ ಕೂಡಾ ಅವರು ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.