ಅಹಮದಾಬಾದ್(ಗುಜರಾತ್): ದೇಹವನ್ನು ಸದೃಢವಾಗಿಡಲು ಕ್ರೀಡಾ ಚಟುವಟಿಕೆ ಬಹಳ ಮುಖ್ಯ. ಪೋಷಕರು ತಮ್ಮ ಮಕ್ಕಳನ್ನು ಕ್ರೀಡೆಗೆ ಕಳುಹಿಸಬೇಕು. ಆಟ ಆಡುವುದು ಸಮಯ ವ್ಯರ್ಥಮಾಡುವುದಕ್ಕೆ ಅಲ್ಲ, ಇದು ಪಾತ್ರವನ್ನು ನಿರ್ಮಿಸುವ ಚಟುವಟಿಕೆಯಾಗಿದೆ. ಕ್ರೀಡೆಯು ದೇಹವನ್ನು ಫಿಟ್ ಆಗಿ ಇಡುತ್ತದೆ ಎಂದು ಖ್ಯಾತ ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ನಡೆದ ಜಿಮ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಮಾಡೆಲ್ ಮಾತ್ರವಲ್ಲ ಈಜು, ಗಾಲ್ಫ್, ಕುದುರೆ ಸವಾರಿ ಮತ್ತು ಸ್ಕೈ ಡೈವಿಂಗ್ ಮಾಡಿದ್ದೇನೆ. ಕೋವಿಡ್ ಕಾಲದಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳುವುದು ಬಹಳ ಮುಖ್ಯ ಎಂಬುದನ್ನು ನಾವೆಲ್ಲರೂ ಅರಿತಿದ್ದೇವೆ ಎಂದರು.
ಬಾಲಿವುಡ್‌ನಲ್ಲಿ ಕೆಲಸ ಮಾಡಲು ಫಿಟ್ನೆಸ್ ಬಹಳ ಮುಖ್ಯ
ಸಿನಿ ಕ್ಷೇತ್ರದಲ್ಲಿ ಕೆಲಸ ಮಾಡಲು ಫಿಟ್ನೆಸ್ ಬಹಳ ಮುಖ್ಯ. ಸಿನಿಮಾ ನೋಡಿದ್ರೆ ಡ್ಯಾನ್ಸ್ ಮಾಡುವುದು ತುಂಬಾ ಸುಲಭ ಅನಿಸುತ್ತೆ. ಆದರೆ ಅದು ತುಂಬಾ ಕಷ್ಟ. ಅದಕ್ಕಾಗಿ ನಿರಂತರವಾಗಿ ಶ್ರಮಿಸಬೇಕು ಎಂದು ತಮ್ಮ ಅನುಭವದ ಮಾತುಗಳನ್ನು ನಟಿ ಚಿತ್ರಾಂಗದಾ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಗೆ ಸಲ್ಮಾನ್ ಖಾನ್ 'ಟೈಗರ್ ಬಾಡಿಗಾರ್ಡ್' ಹೈ ಸೆಕ್ಯೂರಿಟಿ..!