ಮುಂಬೈ : ಡ್ರಗ್ ಜಾಲ ನಂಟು ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿರಿಯ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಫಿರೋಜ್ ನಾಡಿಯಾಡ್ವಾಲಾ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಫಿರೋಝ್ ನಾಡಿಯಾಡ್ವಾಲಾ ಪತ್ನಿ ಶಬಾನಾ ಸಯೀದ್ಳನ್ನು ಈ ಹಿಂದೆ ಎನ್‌ಸಿಬಿ ಅಧಿಕಾರಿಗಳು ಬಂಧಿಸಿ ಆಕೆಯಿಂದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಲು ನಾಡಿಯಾಡ್ವಾಲಾಗೆ ಎನ್‌ಸಿಬಿ ಸಮನ್ಸ್ ನೀಡಿತ್ತು.
ಶಬಾನಾ ಸೈಯೀದ್ಳನ್ನು ಸೋಮವಾರ ಮಧ್ಯಾಹ್ಯ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಶಬಾನಾ ಬಂಧನವಾಗಿರುವ ವಿಚಾರ ಬಾಲಿವುಡ್ ಮಂದಿಯನ್ನು ದಿಗ್ಭಮೆಗೊಳಿಸಿದೆ.
ಕಳೆದ ಭಾನುವಾರ ಎನ್‌ಸಿಬಿ ಫಿರೋಜ್ ನಾಡಿಯಾಡ್ವಾಲಾ ಮನೆಗೆ ದಾಳಿ ನಡೆಸಿದಾಗ, ಆತ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಫಿರೋಝ್ ಮನೆ, ಇತರ ಸ್ಥಳಗಳಿಂದ ಮತ್ತು ನಾಲ್ಕು ಡ್ರಗ್ ಪೆಡ್ಲರ್ಗಳಿಂದ ಸುಮಾರು 3.59 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಎನ್‌ಸಿಬಿ ಅಧಿಕಾರಿಗಳು ಫಿರೋಝ್- ಶಬಾನಾ ಮನೆಯಿಂದ 717.1 ಗ್ರಾಂ ಗಾಂಜಾ, 74.1 ಗ್ರಾಂ ಚರಸ್ ಮತ್ತು 95.1 ಗ್ರಾಂ ಎಂಡಿ ವಶಪಡಿಸಿಕೊಂಡಿದ್ದಾರೆ, ಪಿರೋಝ್ನ ಜಹು ನಿವಾಸದಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ, ವಾಹಿದ್ ಎ ಖಾದಿರ್ ಶೈಖ್ ಎಂಬಾತನಿಂದ 10 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.