ಹೈದರಾಬಾದ್: ಈ ಹಿಂದೆ ಟೈಗರ್ ಶ್ರಾಫ್, ವಿಕಿ ಕೌಶಲ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿ ಹಲವಾರು ತಾರೆಯರಿಗೆ ಜಾಲತಾಣಗಳಲ್ಲಿ ಮದುವೆ ಪ್ರಸ್ತಾಪಗಳು ಬಂದಿವೆ. ಇಂಥಹದ್ದೇ ಒಂದು ಪಟ್ಟಿಗೆ ನಟಿ ಸೋನಾಕ್ಷಿ ಸಿನ್ಹಾ ಸೇರ್ಪಡೆಯಾಗಿದ್ದಾರೆ.
ಸೋನಾಕ್ಷಿ ಸಿನ್ಹಾ ಕಾಕುಡ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ರು. ಆದ್ರೆ, ನಿನ್ನೆ ಅವರು ಶೂಟಿಂಗ್ನಿಂದ ಕೊಂಚ ರಿಲೀಫ್ ಪಡೆದಿದ್ದು, ಇನ್ಸ್ಟಾದಲ್ಲಿ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋಗಳಿಗೆ ಫ್ಯಾನ್ಸ್ ಕಮೆಂಟ್ ಹಾಕಿದ್ದು, ಹಲವು ಪ್ರಶ್ನೆಗಳನ್ನೂ ಎತ್ತಿದ್ದಾರೆ. ಅಲ್ಲದೆ, ಕೆಲ ಪ್ರಪೋಸಲ್ಗಳು ಕೂಡ ಬಂದಿವೆ.
ಅಭಿಮಾನಿಯೊಬ್ಬ ಯು ಮ್ಯಾರಿ ಮಿ(You Marry Me) ಎಂದು ಕಮೆಂಟ್ ಹಾಕಿದ್ದಾರೆ. ನಾನು ಇನ್ಸ್ಟಾದಲ್ಲಿ ಬರುವ ಪ್ರಪೋಸ್ಗಳನ್ನು ಸ್ವೀಕರಿಸಲ್ಲ ಎಂದು ಸೋನಾಕ್ಷಿ ಸಿನ್ಹಾ ಖಡಕ್ ಆಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಪತ್ನಿಯನ್ನೇ ಮತ್ತೆ ವಿವಾಹವಾದ ಪ್ರಕಾಶ್ ರಾಜ್.. ಇದೆಲ್ಲಾ ಮಗನಿಗಾಗಿ ಎಂದ ನಟ..
ನಟಿ, ಪ್ರಸ್ತುತ ಕಾಕುಡ ಸಿನಿಮಾದ ಚಿತ್ರೀಕರಣಕ್ಕಾಗಿ ಗುಜರಾತ್ನಲ್ಲಿದ್ದಾರೆ. ಈ ಸಿನಿಮಾದಲ್ಲಿ ರಿತೇಶ್ ದೇಶ್ಮುಖ್ ಮತ್ತು ಸಾಕಿಬ್ ಸಲೀಂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದಿತ್ಯ ಸರ್ಪೋತ್ತರ್ ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.