ನವದೆಹಲಿ: ಪಕ್ಷಪಾತವಿಲ್ಲದೆ ತಮ್ಮ ಸಹೋದರನ ಸಾವಿನ ಪ್ರಕರಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ, ಸತ್ಯ ಹೊರಬರುವುದನ್ನು ಬಿಟ್ಟು ಬೇರೇನನ್ನೂ ನಿರೀಕ್ಷಿಸುವುದಿಲ್ಲ ಎಂದು ಹೇಳಿದ್ದಾರೆ.
-
We stand together as a nation for CBI Enquiry! Demanding an unbiased investigation is our right and we expect nothing but the truth to come out. 🙏 #CBIForSSR #Warriors4SSR #justiceforSushanthSinghRajput @PMOIndia @narendramodi @AmitShah pic.twitter.com/5WgkaUQybJ
— shweta singh kirti (@shwetasinghkirt) August 13, 2020 " class="align-text-top noRightClick twitterSection" data="
">We stand together as a nation for CBI Enquiry! Demanding an unbiased investigation is our right and we expect nothing but the truth to come out. 🙏 #CBIForSSR #Warriors4SSR #justiceforSushanthSinghRajput @PMOIndia @narendramodi @AmitShah pic.twitter.com/5WgkaUQybJ
— shweta singh kirti (@shwetasinghkirt) August 13, 2020We stand together as a nation for CBI Enquiry! Demanding an unbiased investigation is our right and we expect nothing but the truth to come out. 🙏 #CBIForSSR #Warriors4SSR #justiceforSushanthSinghRajput @PMOIndia @narendramodi @AmitShah pic.twitter.com/5WgkaUQybJ
— shweta singh kirti (@shwetasinghkirt) August 13, 2020
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಶ್ವೇತಾ ಸಿಂಗ್, ಸಿಬಿಐ ವಿಚಾರಣೆಗೆ ನಾವು ಒಂದು ರಾಷ್ಟ್ರವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ. ಪಕ್ಷಪಾತವಿಲ್ಲದ ತನಿಖೆಗೆ ಒತ್ತಾಯಿಸುವುದು ನಮ್ಮ ಹಕ್ಕು, ಸತ್ಯ ಬೆಳಕಿಗೆ ಬರುವುದನ್ನು ಬಿಟ್ಟು ಬೇರಾವ ನಿರೀಕ್ಷೆಗಳೂ ಇಲ್ಲ. ಸುಶಾಂತ್‌ಗಾಗಿ ಎಲ್ಲರೂ ಒಟ್ಟಾಗಿ ನಿಂತು ಸಿಬಿಐ ವಿಚಾರಣೆಗೆ ಒತ್ತಾಯಿಸಬೇಕೆಂದು ನಾನು ವಿನಂತಿಸುತ್ತೇನೆ. ಸುಶಾಂತ್ ಸಾವಿಗೆ ನ್ಯಾಯ ಒದಗಿಸದಿದ್ದರೆ ನಾವು ಎಂದಿಗೂ ಶಾಂತಿಯುತ ಜೀವನ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಶ್ವೇತಾ #CBIForSSR ಎಂದು ಬರೆದಿರುವ ಪ್ಲಕಾರ್ಡ್ವೊಂದನ್ನು ಹಿಡಿದಿರುವುದು ಕಂಡುಬರುತ್ತದೆ.
- " class="align-text-top noRightClick twitterSection" data="
">
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸಂಬಂಧ ಬಿಹಾರ ಸರ್ಕಾರ ನೀಡಿರುವ ದೂರು ಆಧರಿಸಿ ವಿವಿಧ ಆಯಾಮಗಳಲ್ಲಿ ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ನಟಿ ರಿಯಾ ಚಕ್ರವರ್ತಿ, ಶೃತಿ ಮೋದಿ ಮತ್ತು ಸಿದ್ಧಾರ್ಥ್ ಪಿಥಾನಿ ಸೇರಿದಂತೆ ಆರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.