ಮಂಬೈ: ನಟ ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ಅಭಿನಯದ "ಬಾಘಿ 3" ಚಿತ್ರದಲ್ಲಿ ನಟಿ ದಿಶಾ ಪಠಾನಿ "ಡು ಯು ಲವ್ ಮಿ" ಸಾಂಗ್ಗೆ ಸೊಂಟ ಬಳುಕಿಸಿರುವ ವಿಡಿಯೋ ಬಿಡುಗಡೆಯಾಗಿದೆ.
- " class="align-text-top noRightClick twitterSection" data="">
ಈ ಬಗ್ಗೆ ನಟ ರೆನೆ ಬೆಂಡಾಲಿ ಇಂದು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಸಾಂಗ್ ಬಿಡುಗಡೆಯಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಎರಡು ನಿಮಿಷ ಹದಿನಾರು ಸೆಕೆಂಡುಗಳ ಸಾಂಗ್ನಲ್ಲಿ ದಿಶಾ ಪಠಾನಿ, ಟೈಗರ್ ಶ್ರಾಫ್ ಜೊತೆ ಮಸ್ತ್ ಸ್ಟೆಪ್ಸ್ ಹಾಕಿ ಎಲ್ಲರ ಕಣ್ಣು ಕುಕ್ಕುವಂತೆ ಮಾಡಿದ್ದಾರೆ. ಬಾಘಿ 2 ಚಿತ್ರದಲ್ಲಿ ಟೈಗರ್ ಶ್ರಾಫ್ ಜೊತೆ ಪರದೆ ಹಂಚಿಕೊಂಡಿದ್ದ ದಿಶಾ, ಈ ಬಾರಿ ಬಾಘಿ 3 ಚಿತ್ರದಲ್ಲಿ ಒಂದು ಹಾಡಿನಲ್ಲಿ ಬಂದು ಹೋಗಿದ್ದಾರೆ.
ಚಿತ್ರದಲ್ಲಿ ಜಾಕಿ ಶ್ರಾಫ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಅಹ್ಮದ್ ಖಾನ್ ಹಾಗೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಇಂಡಿಯಾ ನಿರ್ಮಿಸಿರುವ ಈ ಚಿತ್ರ ಮಾರ್ಚ್ 6ರಂದು ರಿಲೀಸ್ ಆಗಲಿದೆ.