ಇಂದು ಇಹಲೋಕ ತ್ಯಜಿಸಿದ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ಮುಂಬೈನ ಸಾಂತಕ್ರೂಜ್‌ನಲ್ಲಿರುವ ಜುಹು ಕಬ್ರಾಸ್ತಾನ್‌ನಲ್ಲಿ ನೆರವೇರಿಸಲಾಯಿತು. ಸಕಲ ಸರ್ಕಾರಿ ಗೌರಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಿತು.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆಪ್ತ ಸ್ನೇಹಿತನ ಕೊನೆಯ ವಿಧಿ-ವಿಧಾನಗಳಲ್ಲಿ ಭಾಗವಹಿಸಿದ್ದರು. ಹಿರಿಯ ನಟ ದಿಲೀಪ್ ಕುಮಾರ್ ಅವರ ಕುಟುಂಬ, ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. ಜುಹು ಕಬ್ರಾಸ್ತಾನ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲಾಯಿತು.
-
State funeral protocols - #DilipKumar saab being draped with the beautiful tricolor. pic.twitter.com/fmYMdJLOBD
— faisal farooqui (@FAISALmouthshut) July 7, 2021 " class="align-text-top noRightClick twitterSection" data="
">State funeral protocols - #DilipKumar saab being draped with the beautiful tricolor. pic.twitter.com/fmYMdJLOBD
— faisal farooqui (@FAISALmouthshut) July 7, 2021State funeral protocols - #DilipKumar saab being draped with the beautiful tricolor. pic.twitter.com/fmYMdJLOBD
— faisal farooqui (@FAISALmouthshut) July 7, 2021
ಖ್ಯಾತ ಬಾಲಿವುಡ್ ನಟ ದಿಲೀಪ್ ಕುಮಾರ್ ಇಂದು ಬೆಳಗ್ಗೆ 7.30ರ ಸುಮಾರಿಗೆ ನಿಧನರಾಗಿದ್ದರು. ಕಳೆದ ಕೆಲವು ದಿನಗಳಿಂದ ವಯೋಸಹಜ ಕಾಯಿಲೆಗೆ ಸಂಬಂಧಿಸಿದಂತೆ ಅವರು ಮುಂಬೈ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಓದಿ: ಹಿರಿಯ ನಟ ದಿಲೀಪ್ ಕುಮಾರ್ ವಿಧಿವಶ.. ಬಾಲಿವುಡ್ನ 'ದೇವದಾಸ್' ಇನ್ನಿಲ್ಲ