ನವದೆಹಲಿ: ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ, ಭರತನಾಟ್ಯ ನೃತ್ಯಗಾರ್ತಿ ದೇವೋಲೀನಾ ಭಟ್ಟಾಚಾರ್ಯ ಮತ್ತು ನಟ ವಿಶಾಲ್ ಸಿಂಗ್ ಎಂಗೇಜ್ಮೆಂಟ ಸಂಬಂಧ ಟ್ವಿಸ್ಟ್ ನೀಡಿದ್ದಾರೆ.
ನಾವು ರಿಂಗ್ ಬದಲಾಯಿಸಿಕೊಂಡಿರುವುದು ನಿಜವಾದ ನಿಶ್ಚಿತಾರ್ಥವಲ್ಲ. ಮುಂಬರುವ ಮ್ಯೂಸಿಕ್ ವಿಡಿಯೋವೊಂದರ ಪ್ರಕಟಣೆಗಾಗಿ ಹೀಗೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಈ ಜೋಡಿ, ಈ ರೀತಿಯ ಏನಾದರೂ ನಡೆದರೆ ನಿಮಗೆ ಹೇಳುತ್ತೇವೆ. ನಾವು ಉತ್ತಮ ಸ್ನೇಹಿತರಷ್ಟೇ ಎಂದಿದ್ದಾರೆ.
- " class="align-text-top noRightClick twitterSection" data="
">
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ನಿಶ್ಚಿತಾರ್ಥದ ರಿಂಗ್ ಬದಲಾಯಿಸಿಕೊಂಡ ಬಳಿಕ ವಿಶಾಲ್, ದೇವೋಲೀನಾರನ್ನು ತಬ್ಬಿಕೊಳ್ಳುತ್ತಿರುವುದು, ಪುಷ್ಪಗುಚ್ಛ ನೀಡುತ್ತಿರುವ ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದು ಟ್ವಿಟ್ಟರ್‌ನಲ್ಲಿ ಟ್ರೆಂಡ್ ಕೂಡ ಆಗಿತ್ತು. ಕೆಲವು ಗಂಟೆಗಳ ನಂತರ 'ಇಟ್ಸ್ ಆಫೀಶಿಯಲ್'(ಇದು ಅಧಿಕೃತ) ಎಂಬ ಶೀರ್ಷಿಕೆಯ ಮುಂಬರುವ ಸಂಗೀತ ವಿಡಿಯೋದ ಭಾಗವಾಗಿ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಪೋಸ್ಟ್‌ಗಳಿಗೆ ಅಭಿಮಾನಿಗಳ ಕೂಡ ಪ್ರಕಿತ್ರಿಯೆ ವ್ಯಕ್ತಪಡಿಸಿದ್ದರು. ಇದಕ್ಕೆ ಈ ಜೋಡಿ ಧನ್ಯವಾದ ಸಲ್ಲಿಸಿತ್ತು.
- " class="align-text-top noRightClick twitterSection" data="
">
ಇಬ್ಬರೂ ಸ್ಟಾರ್ ಪ್ಲಸ್ ಸೋಪ್ ಒಪೆರಾ 'ಸಾಥ್ ನಿಭಾನ ಸಾಥಿಯಾ'ದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ದೇವೋಲೀನಾ ಅವರು ಗೋಪಿ ಅಹೆಮ್ ಮೋದಿ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಶಾಲ್ ಸಿಂಗ್ ಜಿಗರ್ ಚಿರಾಗ್ ಮೋದಿ ಪಾತ್ರ ನಿರ್ವಹಿಸಿದ್ದಾರೆ.