ETV Bharat / sitara

ದೀಪಿಕಾ ಹೇಳಿದ ಆ ಪದದ ಅರ್ಥವೇ ಗೊತ್ತಿರಲಿಲ್ಲವಂತೆ ಕಾರ್ತಿಕ್ ಆರ್ಯನ್​​​​​​ಗೆ..!

ಕಳೆದ ವರ್ಷ ಕೇನ್ಸ್​ ಚಿತ್ರೋತ್ಸವಕ್ಕಾಗಿ ಫ್ರಾನ್ಸ್​​​​ಗೆ ತೆರಳಿದ್ದ ದೀಪಿಕಾ, ಗ್ರೀನ್​​​ರೂಮ್​​​ನಲ್ಲಿ ಫನ್ ಮಾಡಿದ್ದ ವಿಡಿಯೋವೊಂದನ್ನು ತಮ್ಮ ಇನ್ಸ್​​​ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ ನೀಡಿರುವ ಕ್ಯಾಪ್ಷನ್​​​​ಗೆ ಕಾರ್ತಿಕ್ ಆರ್ಯನ್ ಕಾಲೆಳೆದಿದ್ದಾರೆ.

Deepika shares Cannes throwback video
ದೀಪಿಕಾ
author img

By

Published : Jun 5, 2020, 3:03 PM IST

ದೀಪಿಕಾ ಪಡುಕೋಣೆ ಸದ್ಯಕ್ಕೆ ಪತಿ ರಣ್ವೀರ್ ಜೊತೆ ಲಾಕ್​​​ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಫ್ರೀ ಇರುವುದರಿಂದ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಡಿಪ್ಸ್ ಸಕ್ರಿಯರಾಗಿದ್ದಾರೆ.

ತಮ್ಮ ಶಾಲಾ ದಿನಗಳ, ಕುಟುಂಬದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​​ಲೋಡ್ ಮಾಡುವ ಮೂಲಕ ಹಳೆಯ ದಿನಗಳನ್ನು ನೆನಪಿಸಿಕೊಂಡಿರುವ ದೀಪಿಕಾ, ಇದೀಗ ಕಳೆದ ವರ್ಷ ಫ್ರಾನ್ಸ್​​​​ನಲ್ಲಿ ನಡೆದ ಕೇನ್ಸ್​​​​ ಚಿತ್ರೋತ್ಸವದ ಗ್ರೀನ್​ ರೂಮ್​​ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚಿತ್ರೋತ್ಸವಕ್ಕೆ ಹೋಗುವ ಮುನ್ನ ಗ್ರೀನ್ ರೂಮ್​​ನಲ್ಲಿ ತಮ್ಮ ತಂಡದೊಂದಿಗೆ ಫನ್ ಮಾಡುತ್ತಿರುವ ವಿಡಿಯೋವನ್ನು ದೀಪಿಕಾ ಇನ್ಸ್​​​ಟಾಗ್ರಾಮ್​​​​ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋಗೆ 'ಗ್ರೀನ್ ರೂಮ್​ ಶೆನಾನಿಗನ್ಸ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ಕಮೆಂಟ್​​ ಮಾಡಿರುವ ಕಾರ್ತಿಕ್ ಆರ್ಯನ್​​​​​​​​ 'ಶೆನಾನಿಗನ್ಸ್' ಎಂದರೆ ಏನು ಎಂದರೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ದೀಪಿಕಾ, ಸಿಲ್ಲಿಯಾಗಿ ವರ್ತಿಸುವುದು, ಉತ್ಸಾಹಭರಿತ ವರ್ತನೆ, ಕೀಟಲೆ ( ನೀನು ಮಾಡುವ ರೀತಿ) ಎಂದು ಉತ್ತರಿಸಿ ನಗುವ ಎಮೋಜಿ ಹಾಕಿದ್ದಾರೆ. ವಿಡಿಯೋ ಅಪ್​​ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ವಿಡಿಯೋವನ್ನು 3.7 ಮಿಲಿಯನ್ ಅಭಿಮಾನಿಗಳು ವೀಕ್ಷಿಸಿದ್ದಾರೆ.

ಕಾರ್ತಿಕ್ ಹಾಗೂ ದೀಪಿಕಾ ಈ ರೀತಿ ಇನ್ಸ್​​​ಟಾಗ್ರಾಮ್​​​ನಲ್ಲಿ ಒಬ್ಬರಿಗೊಬ್ಬರು ಕೀಟಲೆ ಮಾಡುವುದು ಇದೇ ಮೊದಲಲ್ಲ. ಇತ್ತೀಚೆಗೆ ಕಾರ್ತಿಕ್​ ಆರ್ಯನ್ ಇನ್ಸ್​​​ಟಾಗ್ರಾಮ್​​​ನಲ್ಲಿ ಅಭಿಮಾನಿಗಳೊಂದಿಗೆ ಲೈವ್ ಬಂದು, ನನ್ನ ಗಡ್ಡವನ್ನು ಶೇವ್​ ಮಾಡಬೇಕೇ ಬೇಡವೇ ಎಂದು ಪ್ರಶ್ನಿಸಿದಾಗ ಹುಡುಗಿ ಕೈಯನ್ನು ಮೇಲೆ ಎತ್ತಿರುವ ಎಮೋಜಿಯನ್ನು ಕಮೆಂಟ್ ಮಾಡಿದ್ದರು ದೀಪಿಕಾ. ಅಂದರೆ ಕಾರ್ತಿಕ್ ಗಡ್ಡವನ್ನು ಶೇವ್ ಮಾಡಬೇಕು ಎಂದು ಅವರು ಆ ಎಮೋಜಿ ಮೂಲಕ ಸೂಚಿಸಿದ್ದರು.

ಪತಿಯನ್ನು ಪ್ರೀತಿಸುವ, ಪತಿ ಹೆಮ್ಮೆ ಪಡುವಂತ ದೀಪಿಕಾ ರೀತಿಯ ಹುಡುಗಿಯನ್ನು ನಾನು ಮದುವೆಯಾಗಬೇಕು ಎಂದು ಕಾರ್ತಿಕ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮನದಾಸೆ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.