ಕೊರೊನಾ ಭೀತಿ ಹಿನ್ನೆಲೆ ಮನೆಯಲ್ಲಿಯೇ ಇರುವ ನಟಿ ದೀಪಿಕಾ ಪಡಕೋಣೆ ಇಂದಿನ ತಮ್ಮ ದಿನವನ್ನು ಅಡುಗೆ ಮನೆಯಲ್ಲಿ ಅಗತ್ಯ ವಸ್ತುಗಳ ಹೊಂದಾಣಿಕೆ ಮಾಡುವ ಮೂಲಕ ಕಳೆದಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ದೀಪಿಕಾ, ವಿವಿಧ ಅಡಿಗೆ ಪದಾರ್ಥಗಳ ಹೆಸರಿನ ಟ್ಯಾಗ್‌ಗಳನ್ನು ಮುದ್ರಿಸಿ, ಲೇಬಲ್ ಮುದ್ರಣ ಯಂತ್ರದ ಪಕ್ಕದಲ್ಲಿ ಇರಿಸಿ ಪೋಸ್ಟ್ ಮಾಡಿದ್ದಾರೆ.
ಸ್ಲಿಪ್‌ಗಳಲ್ಲಿ ಪೋಹಾ, ಬೆಸನ್, ರಾಜ್ಮಾ, ರೆಡ್ ಚನಾ, ರೆಡ್ ಮಸೂರ್ ದಾಲ್ ಮತ್ತು ಇತರ ಪದಾರ್ಥಗಳ ಹೆಸರುಗಳಿವೆ.
- " class="align-text-top noRightClick twitterSection" data="
">
ಲಾಕ್ಡೌನ್ ದಿನಕ್ಕೊಂದು ರೀತಿಯಲ್ಲಿ ವಿಭಿನ್ನವಾಗಿ ಕಳೆಯುತ್ತಿರುವ ದೀಪಿಕಾ, ಪ್ರತಿದಿನದ ತಮ್ಮ ಚಟುವಟಿಕೆ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.