ಬಾಲಿವುಡ್ ಕ್ಯೂಟ್ ಕಪಲ್ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಆನ್ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ದುಸ್ರಾ ಮಾತಿಲ್ಲ. ಬಿಟೌನ್ಗೆ ಮೂರು ಬ್ಲಾಕ್ಬಸ್ಟರ್ ಸಿನಿಮಾ ನೀಡಿರುವ ಈ ಜೋಡಿ ಈಗ '83' ಚಿತ್ರದಲ್ಲಿ ಮತ್ತೆ ಒಂದಾಗಿದೆ.
ಸತಿ - ಪತಿ ಆದ್ಮೇಲೆ ದೀಪಿಕಾ ಹಾಗೂ ರಣ್ವೀರ್ ಸಿಂಗ್ ಮೊದಲ ಬಾರಿಗೆ ಜತೆಯಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟರ್ ಕಪಿಲ್ ದೇವ್ ಅವರ ಸಾಧನೆಯಾಧಾರಿತ 83 ಸಿನಿಮಾದಲ್ಲಿ ದೀಪ್ವೀರ್ ಒಟ್ಟಾಗಿ ನಟಿಸುತ್ತಿದ್ದಾರೆ. ಸಹಜವಾಗಿಯೇ ಈ ಜೋಡಿಯ ಆನ್ಸ್ಕ್ರೀನ್ ಕೆಮೆಸ್ಟ್ರಿ ಮೇಲೆ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಮದುವೆ ಮುಂಚೆ ಹಾಗೂ ನಂತರದ ಇವರಿಬ್ಬರ ನಟನೆ ಹೇಗಿರುತ್ತೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆಯೇ 83 ಚಿತ್ರದಲ್ಲಿ ತಮ್ಮಿಬ್ಬರ ಕೆಮಿಸ್ಟ್ರಿ ಬಗ್ಗೆ ಮಾತಾಡಿದ್ದಾರೆ ಡಿಪ್ಪಿ. ಮಾಧ್ಯಮವೊಂದಕ್ಕೆ ಮಾತಾಡಿರುವ ಅವರು, ನಮ್ಮ ವೈಯಕ್ತಿಕ ಜೀವನ (ಸಮೀಕರಣ) ಈ ಚಿತ್ರದಲ್ಲಿ ಯಾವುದೇ ಪ್ರಭಾವ ಬಿರುವುದಿಲ್ಲ. ನಮ್ಮ ಪರ್ಸನಲ್ ಕೆಮಿಸ್ಟ್ರಿ ಪರದೆಯ ಮೇಲೆ ಯಾವುದೇ ವಿಶೇಷ ಪ್ರಭಾವ ಬಿರುವುದಿಲ್ಲ. ನಾವು ಪಾತ್ರಗಳ ಮೇಲೆ ಹೆಚ್ಚು ಗಮನ ಹರಿಸುತ್ತೇವೆ ಎಂದಿದ್ದಾರೆ.