ETV Bharat / sitara

ಮಾನಸಿಕ ಆರೋಗ್ಯದ ಕುರಿತು ಜಾಗೃತಿ.. ಮಸ್ತಾನಿ ಮುಡಿಗೆ 'ಕ್ರಿಸ್ಟಲ್​ ಅವಾರ್ಡ್'​ - Deepika Padukone latest news

2015ರ ಜೂನ್​ನಲ್ಲಿ 'ದಿ ಲಿವ್​ ಲವ್​ ಲಾಫ್​ ಫೌಂಡೇಷನ್​'(TLLLF) ಎಂಬ ಸಂಸ್ಥೆಯನ್ನು ಸ್ಥಾಪಿಸಿದ ದೀಪಿಕಾ, ಇದರ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ಹಾಗೂ ಅಭಿಯಾನಗಳನ್ನು ಕೈಗೊಳ್ಳಲು ಆರಂಭಿಸಿದರು. ಇದೀಗ ಅವರ ಈ ಸೇವೆಗೆ ಕ್ರಿಸ್ಟಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Deepika Padukone bags Crystal Award
ದೀಪಿಕಾ ಪಡುಕೋಣೆ
author img

By

Published : Dec 13, 2019, 8:54 PM IST

ನವದೆಹಲಿ: ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಿದ್ದಕ್ಕಾಗಿ ಬಾಲಿವುಡ್​​ ತಾರೆ ದೀಪಿಕಾ ಪಡುಕೋಣೆಗೆ 26ನೇ ವಾರ್ಷಿಕ ಕ್ರಿಸ್ಟಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪಡೆದು ಮಾತನಾಡಿದ ಪಡುಕೋಣೆ ಜಗತ್ತಿನಲ್ಲಿ 300 ಮಿಲಿಯನ್​ಗಿಂತಲೂ ಅಧಿಕ ಜನರು ಅನಾರೋಗ್ಯ, ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದು ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ. ಆದ್ದರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಆರೋಗ್ಯ ಮತ್ತು ಸಾಮಾಜಿಕ ಹೊರೆಗಳನ್ನು ನಾವು ಆಕ್ರಮಣಕಾರಿಯಾಗಿ ಪರಿಹರಿಸಬೇಕಾಗಿದೆ. ಈ ವರ್ಷದ ಕ್ರಿಸ್ಟಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ನಾನು ನಮ್ರಳಾಗಿದ್ದೇನೆ. ನನಗೆ ಒಲಿದು ಬಂದಿರುವ ಈ ಪ್ರಶಸ್ತಿಯನ್ನು ಮಾನಸಿಕ ಅಸ್ವಸ್ಥತೆ, ಒತ್ತಡ, ಆತಂಕ ಮತ್ತು ಖಿನ್ನತೆಯಂತಹ ಮನೋರೋಗದಿಂದ ಬಳಲುತ್ತಿರುವ ಲಕ್ಷಾಂತರ ಜನರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

2015ರ ಜೂನ್​ನಲ್ಲಿ 'ದಿ ಲಿವ್​ ಲವ್​ ಲಾಫ್​ ಫೌಂಡೇಷನ್​' (TLLLF) ಎಂಬ ಸಂಸ್ಥೆಯನ್ನು ಸ್ಥಾಪಿಸಿದ ದೀಪಿಕಾ, ಇದರ ಮೂಲಕ ಮಾನಸಿಕ ಆರೋಗ್ಯದ ಪ್ರಾಮುಖ್ಯತೆ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ಹಾಗೂ ಅಭಿಯಾನಗಳನ್ನು ಕೈಗೊಳ್ಳಲು ಆರಂಭಿಸಿದರು. ಈ ಸಂಸ್ಥೆಯು ಹದಿಹರೆಯದವರಲ್ಲಿ ಆರೋಗ್ಯ ಮತ್ತು ಮಾನಸಿಕ ಅಸ್ವಸ್ಥತೆಗಳ ಕುರಿತು ಜಾಗೃತಿ ಮೂಡಿಸಲು ತರಬೇತಿ, ಸಂಶೋಧನೆ ಮತ್ತು ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.

ಸದ್ಯ ದೀಪಿಕಾ, ತಮ್ಮ ಮುಂದಿನ ಸಿನಿಮಾ 'ಚಪಾಕ್'ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.​​ ಮೇಘನಾ ಗುಲ್ಜಾರ್ ನಿರ್ದೇಶನದ ಈ ಚಿತ್ರವು ಆ್ಯಸಿಡ್​ ದಾಳಿ ಸಂತ್ರಸ್ತೆ ಲಕ್ಷ್ಮಿ ಅಗರ್​ವಾಲ್​ರ ಜಿಔನ ಕಥೆ ಆಧರಿಸಿದ್ದು, ಜನವರಿ 10, 2020 ರಂದು ತೆರೆಗೆ ಬರಲಿದೆ.

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.