ಅತ್ಯಂತ ಪ್ರಸಿದ್ಧ ಮತ್ತು ಕಾಮಿಡಿ ಶೋ 'ದಿ ಕಪಿಲ್ ಶರ್ಮಾ' ಶೋ ಕಳೆದ ಒಂಬತ್ತು ವರ್ಷಗಳಿಂದ ಪ್ರೇಕ್ಷಕರನ್ನು ನಗಿಸುತ್ತಾ ಬಂದಿದೆ. ಈ ಕಾರ್ಯಕ್ರಮದ ಸ್ವರೂಪವು ಎಷ್ಟು ಅದ್ಭುತವಾಗಿದೆ ಎಂದರೆ ಚಿತ್ರರಂಗದ ಖ್ಯಾತ ಕಲಾವಿದರು ಸಹ ಬರಲು ಸಿದ್ಧರಾಗಿದ್ದಾರೆ. ಹೊಸ ಸಂಚಿಕೆಗಳಿಗೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.
- " class="align-text-top noRightClick twitterSection" data="
">
ಇದೀಗ ಕಾರ್ಯಕ್ರಮದ ಮುಂದಿನ ಸಂಚಿಕೆಯ ಪ್ರೋಮೋ ಹೊರಬಿದ್ದಿದ್ದು, ಸಂಗೀತ ಲೋಕದ ಮಾಸ್ಟರ್ಸ್ ದಲೇರ್ ಮೆಹಂದಿ, ಸಲೀಂ ಮತ್ತು ರಿಚಾ ಶರ್ಮಾ ಈ ವಾರದ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೋ ಗಮನಿಸಿದರೆ, ಈ ಶೋನಲ್ಲಿ ಪ್ರೇಕ್ಷಕರು ನಗುವಿನ ಅಲೆಯಲ್ಲಿ ತೇಲೋದರಲ್ಲಿ ಡೌಟೇ ಇಲ್ಲ ಎನಿಸುತ್ತಿದೆ. ಗಾಯಕ ದಲೇರ್ ಮೆಹಂದಿ ಆಘಾತಕಾರಿ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಹೊಸ ಚಿತ್ರದಲ್ಲಿ ರಣಬೀರ್ ಕಪೂರ್ - ಶ್ರದ್ಧಾ ಕಪೂರ್ ಬ್ಯೂಸಿ
ಕಪಿಲ್ ಶರ್ಮಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸುತ್ತಾ, ಹರಿದ್ವಾರದಲ್ಲಿ ಒಂದು ಕಾರ್ಯಕ್ರಮ ಕೊಡುತ್ತಿದ್ದೆವು. ಒಬ್ಬ ವ್ಯಕ್ತಿ ಬಂದು ಜತ್ ಯಮ್ಲಾ ಪಗ್ಲಾ ದಿವಾನಾ ಹಾಡನ್ನು ಹಾಡುವಂತೆ ಕೇಳಿಕೊಂಡನು. ನಾನು ಅವನತ್ತ ಗಮನ ಹರಿಸಲಿಲ್ಲ. ನಂತರ ಅವನು ತನ್ನ ರಿವಾಲ್ವರ್ ಅನ್ನು ತೆಗೆದುಗುಂಡು ಹಾರಿಸಿದನು. ನಾನು ತಕ್ಷಣ ಆ ಹಾಡು ಹಾಡಲು ಪ್ರಾರಂಭಿಸಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದರು.