ಮುಂಬೈ: ನಟಿ ಶಿಲ್ಪಾ ಶೆಟ್ಟಿ ನಿವಾಸಕ್ಕೆ ಆಗಮಿಸಿರುವ ಪೊಲೀಸರು, ಪತಿ ನಡೆಸುತ್ತಿದ್ದ ಬ್ಲೂ ಫಿಲಂ ದಂಧೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಶಿಲ್ಪಾ ಶೆಟ್ಟಿ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ರಾಜ್ ಕುಂದ್ರಾ ಸದ್ಯ ಜುಲೈ 27ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ವಿವಾದದ ಕೇಂದ್ರಬಿಂದು ರಾಜ್ ಕುಂದ್ರಾ ಒಡೆತನದ ವಿಯಾನ್ ಕಂಪನಿಯ ನಿರ್ದೇಶಕರಾಗಿರುವ ಬಗ್ಗೆಯೂ ಶಿಲ್ಪಾ ಶೆಟ್ಟಿ ಅವರನ್ನು ಪ್ರಶ್ನಿಸಲು ಅಪರಾಧ ದಳ ಬಯಸಿದೆ. ವಿಯಾನ್ ಕಚೇರಿಯಿಂದ ಆಪಾದಿತ ಅಶ್ಲೀಲ ಕೃತ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ. 2020ರಲ್ಲಿ ನಿರ್ದೇಶಕ ಹುದ್ದೆಗೆ ಶಿಲ್ಪಾ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಬ್ಲೂ ಫಿಲಂ ದಂಧೆ: ಪತಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿಯೂ ಭಾಗಿಯಾಗಿದ್ದಾರಾ?
ಇತ್ತೀಚೆಗೆ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ವಯಾನ್ ಕಚೇರಿಗೆ ಭೇಟಿ ನೀಡಿದ್ದ ಪೊಲೀಸರು, ಅಶ್ಲೀಲ ಚಲನಚಿತ್ರಗಳ ಬೃಹತ್ ಡೇಟಾ ವಶಪಡಿಸಿಕೊಂಡಿದ್ದರು.
ರಾಜ್ ಕುಂದ್ರಾ ಅವರು ಲಂಡನ್ ಮೂಲದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಮೊಬೈಲ್ ಆ್ಯಪ್ ಮೂಲಕ ಅಶ್ಲೀಲ ವಿಡಿಯೋ ಸ್ಟ್ರೀಮಿಂಗ್ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಂಬೈ ಪೊಲೀಸರು ಇತ್ತೀಚೆಗೆ ತಿಳಿಸಿದ್ದಾರೆ.