ETV Bharat / sitara

ಮಹಾರಾಷ್ಟ್ರ ಕರ್ಫ್ಯೂ: ಸಲ್ಲು, ಶಾರುಖ್​, ಪ್ರಭಾಸ್​​ ಸಿನಿಮಾಗಳಿಗೆ ತಾತ್ಕಾಲಿಕ ಬ್ರೇಕ್

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ‘ಪಠಾಣ್​’, ಸಲ್ಮಾನ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಟೈಗರ್-3’, ಪ್ರಭಾಸ್ ನಟನೆಯ ‘ಆದಿ ಪುರುಷ್’ ಸೇರಿ ‘ಡೋಂಗ್ರಿ ಟು ದುಬೈ’ ವೆಬ್​ ಸೀರಿಸ್ ಚಿತ್ರೀಕರಣ ಬಂದ್ ಆಗಿದೆ.

author img

By

Published : Apr 14, 2021, 9:08 PM IST

covid-19-shoot-put-on-hold-for-srks-pathan-prabhas-adipurush-salmans-tiger-3
ಸಲ್ಲು, ಶಾರುಖ್​, ಪ್ರಭಾಸ್​​ ಸಿನಿಮಾಗಳಿಗೆ ತಾತ್ಕಾಲಿಕ ಬ್ರೇಕ್

ಹೈದರಾಬಾದ್: ಮಹಾರಾಷ್ಟ್ರದಲ್ಲಿ ಕೊರೊನಾ ಅಲೆಯಿಂದಾಗಿ ರಾಜ್ಯದಲ್ಲಿ ಮೇ 1ರ ತನಕ ಕಠಿಣ ಲಾಕ್​ಡೌನ್​ ಜಾರಿಗೆ ತರಲಿದೆ. ಇನ್ನೊಂದೆಡೆ ಕರ್ಫ್ಯೂ ಜಾರಿಯಾಗಿರುವುದರಿಂದ ಬಿಗ್ ಬಜೆಟ್ ಚಿತ್ರಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.

ಹೊಸ ಮಾರ್ಗಸೂಚಿ ಅನ್ವಯ ಸಿನಿಮಾ, ಧಾರಾವಾಹಿ, ಜಾಹೀರಾತು ಚಿತ್ರೀಕರಣ ನಿಷೇಧಗೊಂಡಿದೆ. ಇದರಿಂದಾಗಿ ದೊಡ್ಡ ನಟರು ಶೂಟಿಂಗ್​​​​ನಿಂದ ದೂರ ಉಳಿಯಲಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ‘ಪಠಾಣ್​’, ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಟೈಗರ್-3’, ಪ್ರಭಾಸ್ ನಟನೆಯ ‘ಆದಿಪುರುಷ್’ ಸೇರಿ ‘ಡೋಂಗ್ರಿ ಟು ದುಬೈ’ ವೆಬ್​ ಸೀರಿಸ್ ಚಿತ್ರೀಕರಣ ಬಂದ್ ಆಗಿದೆ.

ವರದಿಗಳ ಪ್ರಕಾರ, ಪಠಾಣ್ ಸಿನಿಮಾ ಸೆಟ್​​​ನಲ್ಲಿದ್ದ ಕೆಲ ಸಿಬ್ಬಂದಿಗೆ ಕೊರೊನಾ ಕಂಡು ಬಂದಿದ್ದು, ಸಿನಿಮಾ ಚಿತ್ರೀಕರಣ ನಿಲ್ಲಿಸಲಾಗಿದೆ. ಬಳಿಕ ಶಾರುಖ್​ ಖಾನ್ ಸಹ ಕ್ವಾರಂಟೈನ್​​ಗೆ ಒಳಗಾಗಿದ್ದರು ಎಂಬ ಸುದ್ದಿ ಹರಿದಾಡಿತು. ಇದಕ್ಕೆ ಸ್ಪಷ್ಟನೆ ನೀಡಿದ ಚಿತ್ರತಂಡ, ಏಪ್ರಿಲ್ 13 ಮತ್ತು 14ಕ್ಕೆ ಮೊದಲೇ ನಿಗದಿಯಾಗಿರುವಂತೆ ವಿರಾಮ ನೀಡಲಾಗಿತ್ತು. 15 ದಿನಗಳ ಬಳಿಕ ಪುನಃ ಚಿತ್ರೀಕರಣ ಆರಂಭಿಸಲಾಗುವುದು ಎಂದಿದ್ದಾರೆ.

ಇತ್ತ ಸಲ್ಮಾನ್ ನಟನೆಯ ಟೈಗರ್-3 ಹಾಗೂ ಪ್ರಭಾಸ್ ನಟನೆಯ ಆದಿಪುರುಷ ಚಿತ್ರೀಕರಣ ಸಹ ಸ್ಥಗಿತಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.