ಮುಂಬೈ: ಕೊರೊನಾ ಸೋಂಕಿಗೆ ಒಳಗಾಗಿದ್ದ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ವರದಿ ಇದೀಗ ನೆಗೆಟಿವ್ ಬಂದಿದ್ದು, ಇತ್ತ ನಟ ಅರ್ಜುನ್ ರಾಂಪಾಲ್ ವರದಿ ಪಾಸಿಟಿವ್ ಆಗಿದೆ.
ಟ್ವೀಟ್ ಮಾಡಿ ಸ್ಪಷ್ಟಪಡಿಸಿರುವ ಅರ್ಜುನ್ ರಾಂಪಾಲ್, "ನನ್ನ ಕೋವಿಡ್ ವರದಿ ಪಾಸಿಟಿವ್ ಬಂದಿದೆ. ರೋಗಲಕ್ಷಣಗಳಿಲ್ಲದಿದ್ದರೂ ಸಹ ಹೋಂ ಕ್ವಾರಂಟೈನ್ಗೆ ಒಳಗಾಗಿರುವೆ. ಅಗತ್ಯವಿರುವ ವೈದ್ಯಕೀಯ ಸಲಹೆ ಪಡೆಯುತ್ತಿರುವೆ.
- — arjun rampal (@rampalarjun) April 17, 2021 " class="align-text-top noRightClick twitterSection" data="
— arjun rampal (@rampalarjun) April 17, 2021
">— arjun rampal (@rampalarjun) April 17, 2021
ಕಳೆದ 10 ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ" ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ವಿಧಿವಶ
"ಇದು ನಮಗೆ ತುಂಬಾ ಭಯಾನಕ ಸಮಯವಾಗಿದೆ. ಆದರೆ ಈ ಅಲ್ಪಾವಧಿಯಲ್ಲಿ ನಾವು ಜಾಗೃತರಾಗಿ, ಬುದ್ಧಿವಂತಿಕೆ ತೋರಿಸಿದರೆ ಅದು ದೀರ್ಘಕಾಲದ ಪ್ರಯೋಜನಗಳನ್ನು ನೀಡುತ್ತದೆ. ಜೊತೆಯಾಗಿ ನಾವು ಕೊರೊನಾ ವಿರುದ್ಧ ಹೋರಾಡೋಣ" ಎಂದು ನಟ ಟ್ವೀಟ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಏಪ್ರಿಲ್ 5ರಂದು ಕೊರೊನಾ ತಗುಲಿರುವುದಾಗಿ ತಿಳಿಸಿದ್ದ ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಇದೀಗ ಸೋಂಕಿನಿಂದ ಗುಣಮುಖರಾಗಿರುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ತಿಳಿಸಿದ್ದಾರೆ.