ETV Bharat / sitara

ಹಿಂದಿಯಿಂದ ಮತ್ತೆ ಹಿಂದಿಗೆ ರಿಮೇಕ್ ಆಗ್ತಿದೆ ಈ ಸಿನಿಮಾ​​​

author img

By

Published : Nov 5, 2019, 9:40 PM IST

ನಿರ್ದೇಶಕ ಡೇವಿಡ್ ಧವನ್ ಇದೀಗ 'ಕೂಲಿ ನಂ 1' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇದು 1995 ರಲ್ಲಿ ಬಿಡುಗಡೆಯಾದ ಗೋವಿಂದ ಹಾಗೂ ಕರೀಷ್ಮಾ ಕಪೂರ್ ನಟನೆಯ 'ಕೂಲಿ ನಂ 1' ಸಿನಿಮಾದ ರಿಮೇಕ್​​​​.

'ಕೂಲಿ ನಂ 1

ಒಂದು ಭಾಷೆಯ ಸಿನಿಮಾಗಳು ಮತ್ತೊಂದು ಭಾಷೆಗೆ ರಿಮೇಕ್ ಆಗುವುದು ಸಾಮಾನ್ಯ. ಆದ್ರೆ ದಶಕಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾ ಮತ್ತೆ ಅದೇ ಭಾಷೆಯಲ್ಲಿ ರಿಮೇಕ್ ಆಗುವುದು ಅಪರೂಪ. ಬಾಲಿವುಡ್​​​ನಲ್ಲಿ ಇದೀಗ ಈ ರೀತಿಯ ರಿಮೇಕ್ ಸಿನಿಮಾ ತಯಾರಾಗುತ್ತಿದೆ.

ಹೀರೋ ನಂ 1, ಜೋಡಿ ನಂ 1, ಶಾದಿ ನಂ 1 ಸಿನಿಮಾಗಳನ್ನು ನಿರ್ದೇಶಿಸಿ ಬಾಲಿವುಡ್​​​ನಲ್ಲಿ ಒಂದು ವಿಭಿನ್ನ ಟ್ರೆಂಡ್​ ಸೃಷ್ಟಿಸಿದ್ದ ನಿರ್ದೇಶಕ ಡೇವಿಡ್ ಧವನ್ ಇದೀಗ 'ಕೂಲಿ ನಂ 1' ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. 1995 ರಲ್ಲಿ ಬಿಡುಗಡೆಯಾಗಿದ್ದ ಗೋವಿಂದ ಹಾಗೂ ಕರೀಷ್ಮಾ ಕಪೂರ್ ನಟನೆಯ 'ಕೂಲಿ ನಂ1' ಸಿನಿಮಾದ ರಿಮೇಕ್​ ಇದು. ಅದೇ ಹೆಸರಿನಲ್ಲಿ ಈ ಸಿನಿಮಾವನ್ನು ತಯಾರಿಸಲಾಗುತ್ತಿದೆ. ಈ ಚಿತ್ರದಲ್ಲಿ ವರುಣ್ ಧವನ್ ಹಾಗೂ ಸಾರಾ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಫೋಟೋ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ರೈಲ್ವೆ ಸ್ಟೇಷನ್​​ನಲ್ಲಿ ನಟ ವರುಣ್ ಧವನ್ ಕೆಂಪು ಷರ್ಟ್​, ಬಿಳಿ ಪ್ಯಾಂಟ್ ಧರಿಸಿ, ತಲೆಗೆ ಕೆಂಪು ಟವೆಲ್ ಸುತ್ತಿಕೊಂಡು ಸಾರಾ ಅಲಿ ಖಾನ್ ಜೊತೆ ಕುಳಿತಿರುವ ಫೋಟೋವನ್ನು ವರುಣ್ ಹಾಗೂ ಸಾರಾ ಇಬ್ಬರೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿಕೊಂಡಿದ್ದಾರೆ. ವಶು ಭಗ್ನಾನಿ ಹಾಗೂ ಜಾಕಿ ಭಗ್ನಾನಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದ ಶೂಟಿಂಗ್ ಬಿರುಸುನಿಂದ ನಡೆಯುತ್ತಿದ್ದು, ಮುಂದಿನ ವರ್ಷ ಮೇ 1 ರಂದು ಈ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ.

Coolie No 1 movie first look out, ಕೂಲಿ ನಂ 1 ಫಸ್ಟ್​​​​​ಲುಕ್ ಬಿಡುಗಡೆ
ಗೋವಿಂದ ಅಭಿನಯದ 'ಕೂಲಿ ನಂ 1' ಚಿತ್ರದ ದೃಶ್ಯ
Coolie No 1 first look updates, ಡೇವಿಡ್ ಧವನ್​​ ನಿರ್ದೇಶನದ ಕೂಲಿ ನಂ 1
'ಕೂಲಿ ನಂ 1' ಚಿತ್ರದಲ್ಲಿ ಸಾರಾ ಅಲಿಖಾನ್, ವರುಣ್ ಧವನ್​

Intro:Body:

cooli no 1

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.