ಹೈದರಾಬಾದ್: ಕಬೀರ್ ಸಿಂಗ್ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಚಿತ್ರ 'ಅನಿಮಲ್'ನಲ್ಲಿ ನಟಿ ಪರಿಣಿತಿ ಚೋಪ್ರಾ ಅವರು ನಟ ರಣಬೀರ್ ಕಪೂರ್ ಅವರೊಂದಿಗೆ ನಟಿಸಲಿದ್ದಾರೆ.
- " class="align-text-top noRightClick twitterSection" data="
">
2019 ರಲ್ಲಿ ತೆರೆಕಂಡ ಕಬೀರ್ ಸಿಂಗ್ ಸಿನೆಮಾ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದ ನಂತರ ಇದು ಭೂಷಣ್ ಕುಮಾರ್ ಅವರ ಟಿ - ಸಿರೀಸ್ ಫಿಲ್ಮ್ಸ್ ಜೊತೆ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರವಾಗಲಿದೆ.
ಇನ್ನೂ ನಟ ರಣಬೀರ್ ಕಪೂರ್ ಅವರೊಂದಿಗೆ ನಟಿಸಲಿರುವ ನಟಿ ಪರಿಣಿತಿ ಚೋಪ್ರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಉತ್ತಮ ಮತ್ತು ಕೃತಜ್ಞತೆ ತುಂಬಿದ ಶೀರ್ಷಿಕೆಯಡಿ ಮಾಹಿತಿ ಹಂಚಿಕೊಂಡಿದ್ದಾರೆ. ಗ್ಯಾಂಗ್ಸ್ಟರ್ ಡ್ರಾಮಾ ಎಂದು ವರದಿಯಾದ ಈ ಚಿತ್ರದ ನಡುವೆ ತಂದೆ - ಮಗನ ಸಂಬಂಧದ ಕುರಿತಾದ ಕಥೆ ಇದೆ ಎಂದು ವಿಡಿಯೋ ತಿಳಿಸುತ್ತದೆ. ಪರಿಣಿತಿ ಮತ್ತು ರಣಬೀರ್ ಜೊತೆಗೆ, ಈ ಚಿತ್ರದಲ್ಲಿ ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.