ETV Bharat / sitara

ತಮಿಳಿನ ವಿಕ್ರಮ್​ ವೇದಾ ಹಿಂದಿಗೆ ರಿಮೇಕ್​.. ಸೈಫ್, ಹೃತಿಕ್ ರೋಷನ್ ತಾರಾಗಣ.. - ಬಾಲಿವುಡ್ ಲೇಟೆಸ್ಟ್ ನ್ಯೂಸ್

ಇದಕ್ಕೂ ಮೊದಲು ಆಮೀರ್ ಖಾನ್ ವಿಕ್ರಮ್ ವೇದಾ ಚಿತ್ರದ ರಿಮೇಕ್​ನಲ್ಲಿ ಕಾಣಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಪ್ರಾಜೆಕ್ಟ್​ನಿಂದ ಆಮೀರ್ ಖಾನ್ ಹಿಂದೆ ಸರಿದ ಕಾರಣದಿಂದ ಆ ಸ್ಥಾನಕ್ಕೆ ಹೃತಿಕ್ ರೋಷನ್ ಬಂದಿದ್ದಾರೆ..

Confirmed! Hrithik Roshan, Saif Ali Khan to headline Vikram Vedha remake
http://10.10.50.80:6060//finalout3/odisha-nle/thumbnail/10-July-2021/12413472_793_12413472_1625897607008.png
author img

By

Published : Jul 10, 2021, 4:54 PM IST

ಹೈದರಾಬಾದ್ ​: ಕಾಲಿವುಡ್​ನ ಬ್ಲಾಕ್​ಬಸ್ಟರ್, ಸೂಪರ್​ ಹಿಟ್ 'ವಿಕ್ರಮ್ ವೇದಾ' ಸಿನಿಮಾ ಬಾಲಿವುಡ್​ಗೆ ರಿಮೇಕ್ ಆಗುವುದು ಪಕ್ಕಾ. ಬಾಲಿವುಡ್​​ನಲ್ಲಿ ತಯಾರಾಗುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿಖಾನ್ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನಲ್ಲಿ ನಟಿಸಿದ್ದ ವಿಜಯ್ ​ಸೇತುಪತಿ ಮತ್ತು ಆರ್​.ಮಾಧವನ್ ಪಾತ್ರವನ್ನು ಈ ಇಬ್ಬರು ನಿರ್ವಹಿಸಲಿದ್ದಾರೆ.

ಬಾಲಿವುಡ್ ಟ್ರೇಡ್ ಅನಾಲಿಸ್ಟ್​ ತರಣ್ ಆದರ್ಶ್​ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಹೃತಿಕ್ ಮತ್ತು ಸೈಫ್ ವಿಕ್ರಮ್ ವೇದಾ ರಿಮೇಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ' ಎಂದಿದ್ದಾರೆ. ವಿಕ್ರಮ್​ ವೇದಾ ಸಿನಿಮಾವನ್ನು ನಿರ್ದೇಶಿಸಿದ್ದ ಪುಷ್ಕರ್​- ಗಾಯತ್ರಿ ಬಾಲಿವುಡ್​ನ ಸಿನಿಮಾಗೂ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

2017ರಲ್ಲಿ ಬಿಡುಗಡೆಯಾಗಿದ್ದ ತಮಿಳಿನ ವಿಕ್ರಮ್​ ವೇದಾ ಸಿನಿಮಾ ಪೊಲೀಸ್ ಮತ್ತು ಗ್ಯಾಂಗ್​ಸ್ಟರ್​ ನಡುವಿನ ಕಥೆ ಹೊಂದಿದೆ. ಬಾಲಿವುಡ್​​ನಲ್ಲಿ ರಿಮೇಕ್​ ಆಗಿ ಸೆಪ್ಟೆಂಬರ್ 30, 2022ಕ್ಕೆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಇದಕ್ಕೂ ಮೊದಲು ಆಮೀರ್ ಖಾನ್ ವಿಕ್ರಮ್ ವೇದಾ ಚಿತ್ರದ ರಿಮೇಕ್​ನಲ್ಲಿ ಕಾಣಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇತ್ತೀಚೆಗೆ ಈ ಪ್ರಾಜೆಕ್ಟ್​ನಿಂದ ಆಮೀರ್ ಖಾನ್ ಹಿಂದೆ ಸರಿದ ಕಾರಣದಿಂದ ಆ ಸ್ಥಾನಕ್ಕೆ ಹೃತಿಕ್ ರೋಷನ್ ಬಂದಿದ್ದಾರೆ.

ಇದನ್ನೂ ಓದಿ: ಅಫ್ಘನ್ನರೇ ಅವರ ದೇಶವನ್ನು ಕಟ್ಟಿಕೊಳ್ಳಬೇಕು, ಅದು ನಮ್ಮ ಜವಾಬ್ದಾರಿ ಅಲ್ಲ : ಜೋ ಬೈಡನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.