ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದ ತನಿಖೆಗಾಗಿ ಸಿಬಿಐ ಐದು ತಂಡಗಳನ್ನು ರಚಿಸಿದ್ದು, ಅದರಲ್ಲಿ ಒಂದು ತಂಡ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ಬಂದಿದೆ.
ಸುಶಾಂತ್ ಅವರ ಮರಣೋತ್ತರ ವರದಿ ಮತ್ತು ಇತರ ಮಾಹಿತಿಯನ್ನು ಪಡೆಯಲು ಸಿಬಿಐ ತಂಡ ಮುಂಬೈ ಪೊಲೀಸರೊಂದಿಗೆ ಮಾತುಕತೆ ನಡೆಸುತ್ತಿದೆ.
ಸಿಬಿಐನ ಮತ್ತೊಂದು ತಂಡ ಸುಶಾಂತ್ ಸಿಂಗ್ ಅವರ ಬಾಂದ್ರಾ ನಿವಾಸದಲ್ಲಿ ತನಿಖೆ ಆರಂಭಿಸಿದೆ.