ವಾಷಿಂಗ್ಟನ್: ಅಮೆರಿಕನ್ ಜನಪ್ರಿಯ ಆ್ಯಕ್ಷನ್ ಪತ್ತೆದಾರಿ ಟೆಲಿವಿಷನ್ ಸೀರಿಸ್ "ಮಿಷನ್ ಇಂಪಾಸಿಬಲ್"ನ ಏಳನೇ ಆವೃತ್ತಿಗೆ ಹೊಸದಾಗಿ ಐವರು ಕಲಾವಿದರು ಸೇರ್ಪಡೆಯಾಗಿದ್ದಾರೆ.
ಕ್ಯಾರಿ ಎಲ್ವೆಸ್, ಇಂದಿರಾ ವರ್ಮಾ, ರಾಬ್ ಡೆಲಾನಿ, ಚಾರ್ಲ್ಸ್ ಪಾರ್ನೆಲ್ ಮತ್ತು ಮಾರ್ಕ್ ಗ್ಯಾಟಿಸ್ ಅವರು "ಮಿಷನ್ ಇಂಪಾಸಿಬಲ್ 7" ಗೆ ಸೇರಲಿದ್ದಾರೆ ಎಂದು ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ಮೆಕ್‌ಕ್ವಾರಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.
ದಿ ಹಾಲಿವುಡ್ ರಿಪೋರ್ಟರ್ ಪ್ರಕಾರ, ನಿರ್ದೇಶಕ ಕ್ರಿಸ್ಟೋಫರ್ ಮೆಕ್‌ಕ್ವಾರಿ ಅವರು ಇನ್ಸ್ಟಾಗ್ರಾಂನಲ್ಲಿ ಮಿಷನ್ ಇಂಪಾಸಿಬಲ್ 7 ಆವೃತ್ತಿಯಲ್ಲಿ ನಟಿಸುವ ಹೆಚ್ಚುವರಿ ಪಾತ್ರವರ್ಗದ ಬಗ್ಗೆ ಅವರ ಕಪ್ಪು ಬಿಳುಪು ಫೋಟೋಗಳನ್ನು ಗುರುವಾರ ಪೋಸ್ಟ್ ಮಾಡುವ ಮೂಲಕ ಮಾಹಿತಿ ಬಹಿರಂಗಗೊಳಿಸಿದ್ದಾರೆ.
ಪ್ಯಾರಾಮೌಂಟ್ ಪಿಕ್ಚರ್ಸ್‌ನ ಮುಂಬರುವ ಆ್ಯಕ್ಷನ್- ಅಡ್ವೆಂಚರ್ ಚಿತ್ರದಲ್ಲಿ ವಿಂಗ್ ರಾಮ್ಸ್, ಹೆನ್ರಿ ಸೆರ್ನಿ, ಸೈಮನ್ ಪೆಗ್, ರೆಬೆಕಾ ಫರ್ಗುಸನ್, ವನೆಸ್ಸಾ ಕಿರ್ಬಿ, ಏಂಜೆಲಾ ಬಾಸ್ಸೆಟ್ ಮತ್ತು ಫ್ರೆಡೆರಿಕ್ ಸ್ಮಿತ್ ಫ್ರ್ಯಾಂಚೈಸ್‌ನಲ್ಲಿ ತಮ್ಮ ಪಾತ್ರಗಳನ್ನು ಮುಂದುವರಿಸಲಿದ್ದಾರೆ.