ETV Bharat / sitara

ನಟಿ ಯಾಮಿ ಗೌತಮ್​ಗೆ ಟೀಕೆಗಳ ಸುರಿಮಳೆ, ಯಾಕೆ ಗೊತ್ತಾ! - ಅಸ್ಸೋಂ ಗಮೋಸಾ

ಅಸ್ಸೋಂನ ಟ್ವಿಟ್ಟರ್​ ಬಳಕೆದಾರನೊಬ್ಬ ಟ್ವೀಟ್​ ಮಾಡಿದ್ದು, ನಟಿ ಯಾಮಿ ಗೌತಮ್​ ಅಸ್ಸೋಂನ ಹೆಮ್ಮೆಯ ಸಂಕೇತವಾದ ಗಮೋಸಾಗೆ ಅಗೌರವ ತೋರಿದ್ದಾರೆ. ಅಭಿಮಾನಿಯೊಬ್ಬರು ಅವರಿಗೆ ಗಮೋಸಾ ತೊಡಿಸಲು ಮುಂದಾದಾಗ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Bollywood actress yami gautam rejecting Assamese gamosa
ಯಾಮಿ ಗೌತಮ್​ಗೆ ಟೀಕೆಗಳ ಸುರಿಮಳೆ
author img

By

Published : Mar 3, 2020, 10:58 AM IST

ಗುವಾಹಟಿ( ಅಸ್ಸೋಂ): ಬಾಲಿವುಡ್​ ನಟಿ ಯಾಮಿ ಗೌತಮ್​, ಅಭಿಮಾನಿ ಹಾಗೂ ಅಸ್ಸೋಂ ಜನತೆಯ ಗೌರವದ ಸಂಕೇತವಾದ ಗಮೋಸಾಗೆ ಅಗೌರವ ತೋರಿದ್ದಾರೆ ಎಂದು ಟೀಕೆಗೆ ಗುರಿಯಾಗಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಯಾಮಿ ಗೌತಮ್​ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಅಭಿಮಾನಿಯೊಬ್ಬರು ನಟಿಯನ್ನು ಸ್ವಾಗತಿಸುವ ಸಲುವಾಗಿ ಅಸ್ಸೋಂ ಗಮೋಸಾ(ಅಸ್ಸೋಂ ಶೈಲಿಯ ಸ್ಕಾರ್ಫ್) ತೊಡಿಸಲು ಮುಂದಾಗಿದ್ದಾರೆ. ಆದ್ರೆ, ಗಮೋಸಾದ ಗೌರವದ ತಿಳಿವಳಿಕೆಯೇ ಇಲ್ಲದಂತಿದ್ದ ನಟಿ ಯಾಮಿ ಗೌತಮ್,​ ಅಭಿಮಾನಿಯ ಈ ಅಭಿಮಾನವನ್ನು ಯಾವುದೇ ಮುಲಾಜಿಲ್ಲದೇ ನಿರಾಕರಿಸಿದ್ದಾರೆ. ಅಭಿಮಾನಿಯ ಕೈ ಹಿಂದಕ್ಕೆ ತಳ್ಳಿದ್ದಾರೆ. ಆ ವೇಳೆ, ನಟಿಯ ಸಹಾಯಕ ಕೂಡಾ ಅಭಿಮಾನಿಯನ್ನು ಹಿಂದಕ್ಕೆ ಹೋಗುವಂತೆ ಸೂಚಿಸಿದ್ದಾರೆ. ಇದಾದ ಬಳಿಕ ನಟಿ ವಿರುದ್ಧ ಸಾಕಷ್ಟು ಟೀಕೆಗಳ ಸುರಿಮಳೆ ಕೇಳಿ ಬರುತ್ತಿದೆ.

ನಟಿ ಯಾಮಿ ಗೌತಮ್​ಗೆ ಟೀಕೆಗಳ ಸುರಿಮಳೆ, ಯಾಕೆ ಗೊತ್ತಾ!

ಈ ಬಗ್ಗೆ ಅಸ್ಸೋಂನ ಟ್ವಿಟ್ಟರ್​ ಬಳಕೆದಾರನೊಬ್ಬ ಟ್ವೀಟ್​ ಮಾಡಿದ್ದು, ನಟಿ ಯಾಮಿ ಗೌತಮ್​ ಅಸ್ಸೋಂನ ಹೆಮ್ಮೆಯ ಸಂಕೇತವಾದ ಗಮೋಸಾಗೆ ಅಗೌರವ ತೋರಿದ್ದಾರೆ. ಅಭಿಮಾನಿಯೊಬ್ಬರು ಅವರಿಗೆ ಗಮೋಸಾ ತೊಡಿಸಲು ಮುಂದಾದಾಗ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋಗಳು ವೈರಲ್​ ಆಗುತ್ತಿದ್ದು, ಅಸ್ಸೋಂ ಜನತೆಯ ಸಾಂಪ್ರದಾಯಿಕ ಬಟ್ಟೆಗೆ ಅವಮಾನ ಮಾಡಿ, ಅವರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂದು ಟೀಕೆಗಳು ವ್ಯಕ್ತವಾಗುತ್ತಿವೆ.

ಯಾಮಿ ಪ್ರತಿಕ್ರಿಯೆ ಏನು ಗೊತ್ತಾ?

  • My reaction was simply self defense. As a woman,if I am uncomfortable with anyone getting too close to me, I or any other girl has every right to express it. I Dint’ intend to hurt anyone's sentiments but it's very important to voice out a behavior, inappropriate in any manner https://t.co/sUc4GPxfWv

    — Yami Gautam (@yamigautam) March 1, 2020 " class="align-text-top noRightClick twitterSection" data=" ">

ಇನ್ನೊಂದೆಡೆ ಟ್ವಿಟ್ಟರ್​ನಲ್ಲೇ ಪ್ರತಿಕ್ರಿಯೆ ನೀಡಿರುವ ಯಾಮಿ, ನನ್ನ ಈ ವರ್ತನೆಗೆ ಕಾರಣ ಆತ್ಮ ರಕ್ಷಣೆ ಅಷ್ಟೇ. ಒಬ್ಬಳು ಹೆಣ್ಣಾಗಿ ನನಗೆ ಇಷ್ಟವಾಗದೆ ಯಾರೇ ಹತ್ತಿರ ಬಂದರೂ, ನನಾಗಲಿ ಅಥವಾ ಯಾವುದೇ ಹೆಣ್ಣಾದರೂ ಅದನ್ನು ನೇರವಾಗಿ ವ್ಯಕ್ತಪಡಿಸುವ ಹಕ್ಕಿದೆ. ಇದರಲ್ಲಿ ಯಾರ ಭಾವನೆಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ಯಾವುದೇ ರೀತಿಯಲ್ಲಿ ಸೂಕ್ತವಲ್ಲದ ನಡವಳಿಕೆಯ ವಿರುದ್ಧ ಧ್ವನಿ ಎತ್ತುವುದು ಬಹಳ ಮುಖ್ಯ ಎಂದು ಖಡಕ್​ ಆಗಿಯೇ ಸ್ಪಷ್ಟನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.