ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರುವ ಬಾಲಿವುಡ್ ಸ್ಟಾರ್ಗಳಲ್ಲಿ ನಟಿ ಊರ್ವಶಿ ಸಹ ಒಬ್ಬರಾಗಿದ್ದಾರೆ. ಕೆಲ ದಿನಗಳ ಹಿಂದೆ ಬಾಕ್ಸಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋವೊಂದನ್ನು ಹಾಕಿ ನೆಟ್ಟಿಗರನ್ನು ಅಚ್ಚರಿಗೊಳಿಸಿದ್ದರು. ಈಗ ರೆಡ್ ಮಡ್ ಬಾತ್ (ಕೆಂಪು ಮಣ್ಣಿನ ಸ್ನಾನ) ಮಾಡುತ್ತಿರುವ ಫೋಟೋವೊಂದನ್ನು ಹಾಕಿ ಅದರ ವಿಶೇಷತೆ ಬಗ್ಗೆ ಹೇಳಿಕೊಂಡಿದ್ದಾರೆ.
ನಟಿ ಊರ್ವಶಿ ರೌತೆಲಾ ಸದ್ಯ ಬಾಲೆರಿಕ್ ಬೀಚ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತಿಚೇಗೆ ಈ ಬೀಚ್ನಲ್ಲಿರುವ ಮಡ್ ಸ್ಪಾ ಸೆಂಟರ್ಗೆ ತೆರಳಿದ್ದರು. ಅಲ್ಲಿ ರೆಡ್ ಮಡ್ ಬಾತ್ ಥೆರಪಿಗೆ ಒಳಗಾಗಿದರು. ಬಳಿಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ರೆಡ್ ಮಡ್ ಬಾತ್ ಮಾಡುತ್ತಿರುವುದರ ಬಗ್ಗೆ ಫೋಟೋವೊಂದನ್ನು ಹರಿಯಬಿಟ್ಟಿದ್ದಾರೆ.
- " class="align-text-top noRightClick twitterSection" data="
">
ಮೊದಲಿನಿಂದಲೂ ನಾನು ಕ್ಲಿಯೋಪಾತ್ರ ಮಣ್ಣಿನ ಸ್ನಾನದ ಪ್ರೇಮಿಯಾಗಿದ್ದೆನೆ. ಬಾಲೆರಿಕ್ ಬೀಚ್ನಲ್ಲಿ ನಾನು ರೆಡ್ ಮಡ್ ಬಾತ್ನ್ನು ಎಂಜಾಯ್ ಮಾಡುತ್ತಿದ್ದೆನೆ. ರೋಮನ್ನ ಪ್ರೀತಿಯ ದೇವತೆ ಶುಕ್ರನು ಇದನ್ನು ಕನ್ನಡಿಯಾಗಿ ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಇದರ ಖನಿಜಯುಕ್ತ ಮಣ್ಣ ಚಿಕಿತ್ಸೆಗೆ ಮತ್ತು ಚರ್ಮಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ಮಣ್ಣಿನ ಚಿಕಿತ್ಸೆಯಿಂದಾಗಿ ಚರ್ಮವನ್ನು ಮೃದುಗೊಳಿಸಬಹುದು, ರಕ್ತಪರಿಚಲನೆಯನ್ನು ಸುಧಾರಿಸುವ ಜೊತೆಗೆ ಅನೇಕ ಲಾಭಗಳಿವೆ ಎಂದು ನಟಿ ಊರ್ವಶಿ ತಮ್ಮ ಇನ್ಸ್ಟಾಗ್ರಾಂದಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಈ ಪೋಸ್ಟ್ನ್ನು ನಟಿ ಊರ್ವಶಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ಕೆಲವೇ ಕ್ಷಣಗಳಲ್ಲೇ 3 ಲಕ್ಷಕ್ಕೂ ಅಧಿಕ ಲೈಕ್ಗಳು ಪಡೆದುಕೊಂಡಿದ್ದಾರೆ.