ETV Bharat / sitara

ಧಮ್​ ಎಳೆದ ಅಕ್ಕ ಪ್ರಿಯಾಂಕಾ ಚೋಪ್ರಾ ಬಗ್ಗೆ ಪರಿಣಿತಿ ಹೇಳಿದ್ದೇನು ? - ಧಮ್​ ಎಳೆದ ಅಕ್ಕ ಪ್ರಿಯಾಂಕಾ ಚೋಪ್ರಾ ಬಗ್ಗೆ ಪರಿಣಿತಿ ಹೇಳಿದ್ದೇ

ಸಿಗರೇಟ್ ಸುಟ್ಟು ಟೀಕೆಗೆ ಗುರಿಯಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಬಗ್ಗೆ ಅವರ ಸಹೋದರಿ ಪರಿಣಿತಿ ಚೋಪ್ರಾ ಮಾತಾಡಿದ್ದಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Jul 27, 2019, 1:12 PM IST

ಧಮ್​ ಎಳೆದ ಅಕ್ಕ ಪ್ರಿಯಾಂಕಾ ಚೋಪ್ರಾ ಬಗ್ಗೆ ಪರಿಣಿತಿ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ 37 ನೇ ವಸಂತಕ್ಕೆ ಕಾಲಿಟ್ಟ ಪಿಗ್ಗಿ ಗಂಡ ಹಾಗೂ ಅಮ್ಮನ ಜತೆ ಮಿಯಾಮಿ ಬೀಚ್​​ಗೆ ತೆರಳಿದ್ದರು. ಅಲ್ಲಿ ವಿಹಾರದ ವೇಳೆ ಇಡೀ ಫ್ಯಾಮಿಲಿ ಸ್ಮೋಕ್ ಮಾಡಿತ್ತು. ಅಮ್ಮ ಮಧು ಚೋಪ್ರಾ ಹಾಗೂ ಪತಿ ಹಾಲಿವುಡ್ ಹಾಡುಗಾರ ನಿಕ್ ಜೊನಸ್ ದಪ್ಪನೇಯ ಸಿಗಾರ್ ಸೇದುತ್ತಿದ್ದರೆ, ಪ್ರಿಯಾಂಕಾ ಸಿಗರೇಟ್​ ತುಂಡು ಬಾಯಿಗೆ ಇಟ್ಟುಕೊಂಡಿದ್ದರು. ಅವರ ಈ ಮೋಜಿನ ಪೋಟೊ ಲೀಕ್ ಆಗಿ ಸಿಕ್ಕಾಪಟ್ಟೆ ಟ್ರೋಲ್​ ಆಯಿತು. ಪರಿಸರ ಹಾಗೂ ಅಸ್ತಮಾ ಖಾಲಿಗೆ ತಡೆ ಜಾಗೃತಿ ಮೂಡಿಸಿದ್ದ ಪ್ರಿಯಾಂಕಾ, ಸ್ಮೋಕ್ ಮಾಡಿ ಟೀಕೆಗೆ ಗುರಿಯಾಗಿದ್ದರು.

ತಮ್ಮ ವಿರುದ್ಧ ಕೇಳಿ ಬಂದಿದ್ದ ಟೀಕೆಗಳಿಗೆ ಪ್ರಿಯಾಂಕಾ ಮೌನ ವಹಿಸಿದ್ದಾರೆ. ಈ ಬಗ್ಗೆ ಎಲ್ಲಿಯೂ ಕೂಡ ತುಟಿ ಬಿಚ್ಚಿಲ್ಲ. ಆದರೆ, ಅವರ ಸಹೋದರಿ ನಟಿ ಪರಿಣಿತಿ ತನ್ನ ಅಕ್ಕನ ರಾದ್ದಾಂತದ ಬಗ್ಗೆ ಮಾತಾಡಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ಆ ವಿಷಯದ ಬಗ್ಗೆ ಕಮೆಂಟ್ ಮಾಡುವ ಸ್ಥಾನದಲ್ಲಿ ನಾನಿಲ್ಲ. ಅದು ನನಗೆ ಅತ್ಯಂತ ಸೂಕ್ಷ್ಮ ವಿಚಾರ ಎಂದಿದ್ದಾರೆ.

ಅಷ್ಟೇ ಅಲ್ಲ, ಧಮ್​ ಎಳೆದ ಅಕ್ಕ ಪ್ರಿಯಾಂಕಾ ಚೋಪ್ರಾ ಬಗ್ಗೆ ಪರಿಣಿತಿ ಹೇಳಿದ್ದೇನೆಂದರೆ, 'ಅವರ ಸ್ಮೋಕಿಂಗ್ ಪ್ರಶ್ನಿಸುವ ಪ್ರಶ್ನಿಸುವ ಹಕ್ಕು ನನಗಿಲ್ಲ. ಆದ್ದರಿಂದ ಆ ಬಗ್ಗೆ ನಾನು ಮಾತನಾಡಲು ಇಚ್ಛಿಸುವುದಿಲ್ಲ. ಇದು ನನ್ನ ಅಕ್ಕನ ಕುರಿತಾದ ವಿಚಾರ ಆಗಿದ್ದರಿಂದ ನಂಗೆ ತುಂಬ ಸೂಕ್ಷವಾಗಿ ಪರಿಣಮಿಸುತ್ತದೆ' ಎಂದು ಉತ್ತರಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.