ETV Bharat / sitara

ಹಸಿದ ಸಿಂಹಕ್ಕೆ ತನ್ನ ಕೈಯಾರೇ ಮಾಂಸ ತಿನಿಸಿದ ನೋರಾ ಫತೇಹಿ! ವಿಡಿಯೋ..

author img

By

Published : Feb 5, 2022, 2:15 PM IST

Updated : Feb 5, 2022, 2:24 PM IST

ಬಾಲಿವುಡ್​ನ ನೋರಾ ಫತೇಹಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್​ ಆಗಿರುವ ತಾರೆ. ಜಾಲತಾಣದಲ್ಲಿ ದೊಡ್ಡ ಸಂಖ್ಯೆಯ ಫಾಲೋವರ್ಸ್​ ಹೊಂದಿರುವ ಈ ತಾರೆ ಈಗ ದುಬೈನಲ್ಲಿ ಸಿಂಹಗಳ ಜೊತೆ ಎಂಜಾಯ್​ ಮಾಡ್ತಿದ್ದಾರೆ.

Nora Fatehi feeds hungry lion, Actress Nora Fatehi feeds hungry lion, Actress Nora Fatehi feeds hungry lion in Dubai, Actress Nora Fatehi news, Bollywood actress Nora Fatehi dance, ಹಸಿದ ಸಿಂಹಕ್ಕೆ ಮಾಂಸ ತಿನಿಸಿದ ನೋರಾ ಫತೇಹಿ, ಹಸಿದ ಸಿಂಹಕ್ಕೆ ಮಾಂಸ ತಿನಿಸಿದ ನಟಿ ನೋರಾ ಫತೇಹಿ, ದುಬೈಯಲ್ಲಿ ಹಸಿದ ಸಿಂಹಕ್ಕೆ ಮಾಂಸ ತಿನಿಸಿದ ನೋರಾ ಫತೇಹಿ, ನಟಿ ನೋರಾ ಫತೇಹಿ ಡ್ಯಾನ್ಸ್​, ಬಾಲಿವುಡ್​ ನಟಿ ನೋರಾ ಫತೇಹಿ ಸುದ್ದಿ,
ಕೃಪೆ: Instagram

ದುಬೈ: ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಐಟಂ ಸಾಂಗ್​ ಸುಂದರಿ ನೋರಾ ಫತೇಹಿ ಇನ್‌ಸ್ಟಾಗ್ರಾಮ್ ಖಾತೆ ಇದೀಗ ಮತ್ತೆ ಆರಂಭವಾಗಿದ್ದು, ದುಬೈನಲ್ಲಿ ಸಿಂಹಗಳ ಜೊತೆ ಪೋಸ್​ ನೀಡಿದ್ದಾರೆ. ಅಷ್ಟೇ ಅಲ್ಲದೆ ಹಸಿದ ಸಿಂಹಗಳಿಗೆ ತಮ್ಮ ಕೈಯಾರೆ ಮಾಂಸ ತಿನ್ನಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಸರ್ಕಸ್ ಮತ್ತು ದುಷ್ಕೃತ್ಯಗಳಿಂದ ರಕ್ಷಿಸಲ್ಪಟ್ಟ ಈ ಸುಂದರ ಪ್ರಾಣಿಗಳೊಂದಿಗೆ ಸಂವಹನ ನಡೆಸಲು ನನಗೆ ಈ ಅವಕಾಶವನ್ನು ನೀಡಿದ ಮಸೂದ್ ಮತ್ತು ಅವರ ಇಡೀ ತಂಡಕ್ಕೆ ಧನ್ಯವಾದಗಳು. ನಿಮ್ಮ ಇಡೀ ತಂಡವು ಅವರಿಗೆ ಪುನರ್ವಸತಿ ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ.. ಇದು ನನಗೆ ಅತಿವಾಸ್ತವಿಕವಾದ ಅನುಭವವಾಗಿದೆ ಮತ್ತು ನಾನು ಇದನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ... ಎಂದು ನೋರಾ ತಮ್ಮ ಇನ್​​​​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಓದಿ: ಸ್ಟಿಲ್​ ಬ್ಯಾಚುಲರ್​, ನಾಲ್ಕು ಮಕ್ಕಳ ತಂದೆ ರೊನಾಲ್ಡೊಗೆ 37ನೇ ಜನ್ಮದಿನದ ಸಂಭ್ರಮ!

ನೋರಾ ಸಿಂಹಕ್ಕೆ ಮಾಂಸ ತಿನ್ನಿಸುವಾಗ ಕೊಂಚ ಹೆದರಿದ್ದಾರೆ. ಆದರೂ ಧೈರ್ಯವಾಗಿಯೇ ಸಿಂಹಕ್ಕೆ ಮಾಂಸ ತಿನಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದ್ದು, ತಮಗೆ ಅವಕಾಶ ಕಲ್ಪಿಸಿದ ಮಸೂದ್​ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಶುಕ್ರವಾರ ನಟಿಯ ಇನ್‌ಸ್ಟಾಗ್ರಾಮ್ ಖಾತೆ ದಿಢೀರ್​ ಡಿಲೀಟ್​ ಆಗಿತ್ತು. ಇದರಿಂದ ಅವರ ಫಾಲೋವರ್ಸ್​ ಹತಾಶೆಯಾಗಿದ್ದರು. ನೋರಾ ಇನ್​​​ಸ್ಟಾಗ್ರಾಂ ಅಕೌಂಟ್​ ಮತ್ತೆ ಶುರುವಾಗಿದ್ದು ನಟಿಯೂ ಧನ್ಯವಾದ ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಖಾತೆ ದಿಢೀರ್​ ಡಿಲೀಟ್​ ಆಗಿರುವ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ. 'ಕ್ಷಮಿಸಿ ಗೆಳೆಯರೇ, ನನ್ನ ಇನ್‌ಸ್ಟಾಗ್ರಾಮ್ ಖಾತೆಯನ್ನು ಯಾರೋ ಹ್ಯಾಕ್ ಮಾಡಲು ಪ್ರಯತ್ನಿಸಿದ್ದಾರೆ. ಕಳೆದ ದಿನದಿಂದ ಈ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಸದ್ಯ ಇನ್‌ಸ್ಟಾಗ್ರಾಮ್ ಖಾತೆ ಸರಿಪಡಿಸಲಾಗಿದ್ದು, ಯಥಾಸ್ಥಿತಿಯಂತೆ ನೋಡಬಹುದು ಎಂದು ಹೇಳಿದ್ದಾರೆ.

ಓದಿ: ಬಸಂತ ಪಂಚಮಿ ಹಿನ್ನೆಲೆ ಮಥುರಾ ದೇವಾಲಯಗಳಲ್ಲಿ ವಿಶೇಷ ಪೂಜೆ.. ಹೋಳಿ ಸಂಭ್ರಮ ಶುರು

ನನ್ನ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿದ್ದಕ್ಕಾಗಿ ಇನ್‌ಸ್ಟಾಗ್ರಾಮ್ ತಂಡಕ್ಕೆ ಧನ್ಯವಾದಗಳು' ಎಂದಿದ್ದಾರೆ. ನಟಿಯ ಇನ್‌ಸ್ಟಾಗ್ರಾಮ್ ಮತ್ತೆ ಚಾಲನೆಗೊಂಡಿದ್ದರಿಂದ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ. ಅಸಲಿ ಕಾರಣ ಗೊತ್ತಿಲ್ಲದವರು ಜಾಲತಾಣದಲ್ಲಿ ತರಹೇವಾರಿಯಾಗಿ ಕಾಮೆಂಟ್​ ಮಾಡಿದ್ದಾರೆ. 37.6 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ನೋರಾ ಫತೇಹಿ ಅವರನ್ನು ಇನ್‌ಸ್ಟಾ ಕ್ವೀನ್ ಎಂದೇ ಕರೆಯಲಾಗುತ್ತದೆ.

Last Updated : Feb 5, 2022, 2:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.