ಮಾಡೆಲ್ ಕಂ ನಟಿ ಕೊಯೆನಾ ಮಿತ್ರಾ ಅವರಿಗೆ ಸಂಕಷ್ಟ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣದಡಿ ಈ ಬಾಲಿವುಡ್ ಬ್ಯೂಟಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
2013 ರಲ್ಲಿ ಮಾಡೆಲ್ ಪೂನಂ ಸೇತಿ ಬಳಿ ಪಡೆದಿದ್ದ 22 ಲಕ್ಷ ಸಾಲ ಮರುಪಾವತಿಗೆ ಇವರು ನೀಡಿದ್ದ ₹3 ಲಕ್ಷ ಮೌಲ್ಯದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆ ನಟಿಯ ವಿರುದ್ಧ ಜುಲೈ 19 2013 ರಂದು ಪೂನಂ ನೋಟಿಸ್ ನೀಡಿದ್ದರು. ಆದರೆ, ಇವರ ವಿರುದ್ಧವೇ ಕೊಯೆನಾ ಮರುನೋಟಿಸ್ ಕಳುಹಿಸಿದ್ದರು. ನಂತರ ಅಕ್ಟೋಬರ್ 10, 2013 ರಲ್ಲಿ ಕೊಯೆನಾ ಮಿತ್ರಾ ವಿರುದ್ಧ ಮೆಟ್ರೋಪಾಲಿಟಿನ್ ನ್ಯಾಯಾಲಯದಲ್ಲಿ ಪೂನಂ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್ ಇಂದು ತೀರ್ಪು ಪ್ರಕಟಿಸಿದೆ. ಆರೋಪಿ ಕೊಯೆನಾ ಅವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ, ₹1.64 ಲಕ್ಷ ಬಡ್ಡಿ ಸೇರಿ ₹4.64 ಹಣ ವಾಪಸ್ ನೀಡುವಂತೆ ಕೂಡ ಆದೇಶ ಹೊರಡಿಸಿದೆ.