ಚುಟುಕು ಪಂದ್ಯ ಐಪಿಎಲ್ ಹಬ್ಬದ ನಡುವೆ ಬಾಲಿವುಡ್ ನಟಿ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ತಮ್ಮ ಮುದ್ದಾದ ಮಗನ ಮುಂದಿನ ಭವಿಷ್ಯ ಹೀಗೇ ಇರಬೇಕೆಂಬ ಕನಸನ್ನು ಒಂದು ಪೋಸ್ಟ್ ಮೂಲಕ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ಬೃಹತ್ ಕನಜವನ್ನೇ ಹೊಂದಿರುವ ಐಪಿಎಲ್, ಇದೀಗ ಎಲ್ಲೂ ನೋಡಿದರೂ ಅದರದ್ದೇ ಕಾರುಬಾರು, ಎಲ್ಲರ ಬಾಯಲ್ಲೂ ಅದರದ್ದೇ ಮಾತುಗಳು. ನೆಚ್ಚಿನ ಲೀಗ್ ಪಂದ್ಯ ನಡೆಯುತ್ತಿದ್ದರೆ ಅಭಿಮಾನಿಗಳ ತವಕ ಹೇಳತೀರದು.
- " class="align-text-top noRightClick twitterSection" data="
">
ಹಾಗೆ ನಟಿ ಕರೀನಾ ಕಪೂರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ತಾವೂ ಒಬ್ಬರು ಕ್ರೀಡಾ ಆಸಕ್ತರು ಎಂದು ತೋರಿಸಿಕೊಟ್ಟಿದ್ದಾರೆ. ಆ ಪೋಸ್ಟ್ ತಮ್ಮ ಮುದ್ದಾದ ಮಗನ ಮುಂದಿನ ಭವಿಷ್ಯ ಹೀಗೇ ಇರಬೇಕೆಂಬ ಆಸೆ ವ್ಯಕ್ತಪಡಿಸಿದಂತಿದೆ.
ಇತ್ತೀಚೆಗೆ ತಮ್ಮ ಮಗ ತೈಮೂರ್ ಬ್ಯಾಟ್ ಹಿಡಿದ ಫೋಟೋವೊಂದನ್ನ ಅಧಿಕೃತ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಕರೀನಾ ಕಪೂರ್ ಖಾನ್, ಐಪಿಎಲ್ನಲ್ಲಿ ಯಾವುದಾದರೂ ಸ್ಥಾನವಿದೆಯೇ? ನಾನು ಕೂಡ ಆಡಬಲ್ಲೆ ಎಂಬ ಅಂದದ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.