ETV Bharat / sitara

ಪುನೀತ್ ರಾಜ್​​ ಕುಮಾರ್ ನಿವಾಸಕ್ಕೆ ಬಾಲಿವುಡ್‌ನ ಸಂಜು ಬಾಬಾ.. ಅಶ್ವಿನಿ ಅವರಿಗೆ ಸಾಂತ್ವನ.. - Villain Sanjay Dutt visits Puneeth residence in Sadashivanagar

ಇಂದು ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇದ್ದು, ಈ ಹಿನ್ನೆಲೆ ಸಂಜಯ್ ದತ್ ಬೆಂಗಳೂರಿಗೆ ಬಂದಿದ್ದಾರೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವ್ರನ್ನ ಮಾತನಾಡಿಸಿ ಸಮಾಧಾನದ ಮಾತುಗಳನ್ನ ಹೇಳಿದ್ದಾರೆ..

Bollywood actor visits Puneet Raj Kumar residence
ಪುನೀತ್ ರಾಜ್​​ ಕುಮಾರ್ ನಿವಾಸಕ್ಕೆ ಬಾಲಿವುಡ್ ನಟನ ಭೇಟಿ
author img

By

Published : Mar 27, 2022, 4:44 PM IST

Updated : Mar 27, 2022, 5:05 PM IST

ದೊಡ್ಮನೆ ಮಗ ಹಾಗೂ ಅಭಿಮಾನಿಗಳ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ಐದು ತಿಂಗಳು ಆಯ್ತು‌. ಆದರೆ, ಈ ಯುವರತ್ನನನ್ನು ನೋಡಲು ಇಂದಿಗೂ ಭಾರತೀಯ ಚಿತ್ರರಂಗದ ಸ್ಟಾರ್​ಗಳು ಬರ್ತಾನೆ ಇದ್ದಾರೆ. ಪವರ್ ಸ್ಟಾರ್ ಅಗಲಿಕೆ ಬಳಿಕ, ಸೌತ್​ನ ಸ್ಟಾರ್​​ ಗಳಾದ ಕಮಲ್ ಹಾಸನ್, ಸೂರ್ಯ, ರಾಮ್ ಚರಣ್ ತೇಜಾ, ಅಲ್ಲು ಅರ್ಜುನ್, ನಿರ್ದೇಶಕ ಎಸ್.ಎಸ್. ರಾಜಮೌಳಿ ಸೇರಿದಂತೆ ಸಾಕಷ್ಟು ತಾರೆಯರು, ಸದಾಶಿವನಗರದಲ್ಲಿನ ಪುನೀತ್ ನಿವಾಸಕ್ಕೆ ಭೇಟಿ ನೀಡಿದ್ದರು. ಇದೀಗ ಬಾಲಿವುಡ್​ನ ಸಂಜಯ್ ದತ್ ಸಹ ಭೇಟಿ ನೀಡಿದ್ದಾರೆ.

ಪುನೀತ್ ರಾಜ್​​ ಕುಮಾರ್ ನಿವಾಸಕ್ಕೆ ಸಂಜಯ್​ ದತ್​ ಭೇಟಿ

ಸದಾಶಿವನಗರದ ಪುನೀತ್ ನಿವಾಸಕ್ಕೆ ಭೇಟಿ ನೀಡಿ, ಅಪ್ಪು ಫೋಟೋಗೆ ನಮಿಸಿದ್ದಾರೆ‌. ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್ ಕುಮಾರ್, ಮಕ್ಕಳಾದ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಅವರು ಸಂಜಯ್ ದತ್ ಅವ್ರನ್ನ ಬರಮಾಡಿಕೊಂಡರು. ಸುಮಾರು ಒಂದು ಗಂಟೆಗಳ ಕಾಲ ಪುನೀತ್ ರಾಜ್‍ ಕುಮಾರ್ ನಿವಾಸದಲ್ಲಿ ನಟ‌ ಸಂಜಯ್ ದತ್ ಇದ್ದರು.

ಇದನ್ನೂ ಓದಿ: 'KGF-2' ತೆಲುಗು, ತಮಿಳು ಟ್ರೈಲರ್ ಬಿಡುಗಡೆ ಮಾಡಲಿರುವ ರಾಮ್ ಚರಣ್, ಸೂರ್ಯ

ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ : ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನದ ಬಗ್ಗೆ ಸಂಜಯ್ ದತ್ ತುಂಬಾನೇ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಇದ್ದು, ಈ ಹಿನ್ನೆಲೆ ಸಂಜಯ್ ದತ್ ಬೆಂಗಳೂರಿಗೆ ಬಂದಿದ್ದಾರೆ. ಇದೇ ವೇಳೆ ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಭೇಟಿ ನೀಡಿ, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವ್ರನ್ನ ಮಾತನಾಡಿಸಿ ಸಮಾಧಾನದ ಮಾತುಗಳನ್ನ ಹೇಳಿದ್ದಾರೆ.

Last Updated : Mar 27, 2022, 5:05 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.