ಹೈದರಾಬಾದ್ : ಬಾಲಿವುಡ್ ನಟ ಸೋನು ಸೂದ್ ಆಂಧ್ರಪ್ರದೇಶದ ಬಡ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್‌ನ ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಈ ಹಿಂದೆಯೂ ಯಾರಾದರೂ ಸಮಸ್ಯೆ ಸುಳಿಯಲ್ಲಿ ಸಿಕ್ಕಿಕೊಂಡ ಸಂದರ್ಭದಲ್ಲಿ ಅವರ ಸಹಾಯಕ್ಕೆ ಸೋನು ಸೂದ್ ಬಂದಿದ್ದಾರೆ. ನಿಮ್ಮ ಸಹಾಯಕ್ಕೆ ನಾನಿದ್ದೇನೆ ಎಂದು ಸೂದ್ ಭರವಸೆ ನೀಡಿದ್ದಾರೆ. ಈಗಾಗಲೇ ಅನೇಕ ವಲಸೆ ಕಾರ್ಮಿಕರನ್ನು ತಮ್ಮ ಮನೆಗೆ ಕಳುಹಿಸುವ ಮೂಲಕ ಸೋನು ಸೂದ್ ಮಾನವೀಯತೆ ಮೆರೆದಿದ್ದರು. ಇದರ ಬೆನ್ನಲ್ಲೇ ಆಂಧ್ರದ ಚಿತ್ತೂರು ಜಿಲ್ಲೆಯ ಬಡ ರೈತ ಕುಟುಂಬಕ್ಕೆ ಟ್ರ್ಯಾಕ್ಟರ್ ಖರೀದಿಸುವುದಾಗಿ ಸೂದ್ ಭರವಸೆ ನೀಡಿದ್ದಾರೆ.
-
This family doesn’t deserve a pair of ox 🐂..
— sonu sood (@SonuSood) July 26, 2020 " class="align-text-top noRightClick twitterSection" data="
They deserve a Tractor.
So sending you one.
By evening a tractor will be ploughing your fields 🙏
Stay blessed ❣️🇮🇳 @Karan_Gilhotra #sonalikatractors https://t.co/oWAbJIB1jD
">This family doesn’t deserve a pair of ox 🐂..
— sonu sood (@SonuSood) July 26, 2020
They deserve a Tractor.
So sending you one.
By evening a tractor will be ploughing your fields 🙏
Stay blessed ❣️🇮🇳 @Karan_Gilhotra #sonalikatractors https://t.co/oWAbJIB1jDThis family doesn’t deserve a pair of ox 🐂..
— sonu sood (@SonuSood) July 26, 2020
They deserve a Tractor.
So sending you one.
By evening a tractor will be ploughing your fields 🙏
Stay blessed ❣️🇮🇳 @Karan_Gilhotra #sonalikatractors https://t.co/oWAbJIB1jD
ಚಿತ್ತೂರು ಜಿಲ್ಲೆಯ ಕೆ ಮಹಲ್ ರಾಜಪಲ್ಲಿ ಮಂಡಲದ ರೈತ ನಾಗೇಶ್ವರ ರಾವ್ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳ ಕಷ್ಟದ ಕುರಿತು ವಿಡಿಯೋವೊಂದಕ್ಕೆ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದಾರೆ. ಈ ರೈತ ಕೊರೊನಾ ಬಂದ ನಂತರ ಅಪಾರ ನಷ್ಟದಿಂದ ತನ್ನ ಕೈ ಸುಟ್ಟುಕೊಂಡಿದ್ದ. ಹೀಗಾಗಿ ಗದ್ದೆ ಉಳುಮೆ ಮಾಡುವ ಸಲುವಾಗಿ ಎತ್ತುಗಳನ್ನು ಖರೀದಿಸಲು ಕೂಡ ರೈತನಲ್ಲಿ ಮುಕ್ಕಾಸು ಇರಲಿಲ್ಲ. ಅನಿವಾರ್ಯತೆ ಹಾಗೂ ಅಸಹಾಯಕತೆ ಈ ರೈತನನ್ನು ತನ್ನಿಬ್ಬರು ಹೆಣ್ಣು ಮಕ್ಕಳನ್ನೇ ನೇಗಿಲು ಹಿಡಿಸಿ ಹೊಲ ಉಳುಮೆ ಮಾಡುವಂತೆ ಮಾಡಿದೆ.
ಹೆಣ್ಣು ಮಕ್ಕಳು ಕೋಣಗಳ ಬದಲಿಗೆ ಗದ್ದೆಯಲ್ಲಿ ಉಳುಮೆಗೆ ನಿಂತಿರುವುದನ್ನು ನೋಡಿ, ಸೋನು ಸೂದ್ ಮನ ಮಿಡಿದಿದೆ. ಹೀಗಾಗಿ ಟ್ವಿಟರ್ ಮೂಲಕ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಅವರು, "ಈ ಕುಟುಂಬಕ್ಕೆ ಬೇಕಾಗಿರುವುದು ಎತ್ತುಗಳಲ್ಲ. ಇವರಿಗೆ ಟ್ರ್ಯಾಕ್ಟರ್ ಬೇಕು. ಹೀಗಾಗಿ ಇವರ ಮನೆಗೆ ಟ್ರ್ಯಾಕ್ಟರ್ ಕಳುಹಿಸುತ್ತಿದ್ದೇನೆ. ಇಂದು ಸಂಜೆಯ ಒಳಗಡೆ ನಿಮ್ಮ ಗದ್ದೆಯನ್ನು ಟ್ರ್ಯಾಕ್ಟರ್ ಉಳುಮೆ ಮಾಡಲಿದೆ" ಎಂದು ಸೂದ್ ಭರವಸೆ ನೀಡಿದ್ದಾರೆ.
ಇಂದು ಬೆಳಗ್ಗೆ ಇದೇ ಕುಟುಂಬಕ್ಕೆ ಜೋಡಿ ಎತ್ತುಗಳನ್ನು ಕಳುಹಿಸಿಕೊಡುವುದಾಗಿ ಸೋನು ಸೂದ್ ಭರವಸೆ ನೀಡಿದ್ದರು. ಆದರೆ, ಆ ಬಳಿಕ ನಿರ್ಧಾರ ಬದಲಿಸಿ ಮತ್ತೊಂದು ಉತ್ತಮ ನಿರ್ಧಾರಕ್ಕೆ ಬಂದ ಸೂದ್, ಟ್ರಾಕ್ಟರ್ ಕಳುಹಿಸುವುದಾಗಿ ಹೇಳಿದ್ದಾರೆ. ಅಲ್ಲದೆ ಹೆಣ್ಣುಮಕ್ಕಳ ಶಿಕ್ಷಣದತ್ತ ಗಮನ ಹರಿಸುವಂತೆ ಸೋನು ಹೇಳಿದ್ದಾರೆ.
ರೈತ ಕುಟುಂಬದ ಕಷ್ಟಕ್ಕೆ ಬೆನ್ನೆಲುಬಾಗಿ ನಿಂತ ಸೋನು ಸೂದ್ ಉದಾರತೆಯನ್ನು ನಿಜಕ್ಕೂ ಮೆಚ್ಚಲೇಬೇಕು.