ETV Bharat / sitara

ನಟಿ ಮೇಲೆ ರೇಪ್​ ಆರೋಪ... ಬಾಲಿವುಡ್ ನಟನ ವಿರುದ್ಧ ಎಫ್​ಐಆರ್​​ - ಬಾಲಿವುಡ್ ನಟ

ನಟಿ ಮೇಲೆ ಅತ್ಯಾಚಾರದ ಪ್ರಕರಣದಡಿ ಬಾಲಿವುಡ್​ ನಟ ಆದಿತ್ಯಾ ಪಂಚೊಲಿ ವಿರುದ್ಧ ಮುಂಬೈನ ವರ್ಸೊವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಲಿವುಡ್ ನಟ
author img

By

Published : Jun 28, 2019, 12:30 PM IST

ಆದಿತ್ಯ, 2004 ರಿಂದ 2009 ರ ಅವಧಿಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಈ ಹಿಂದೆಯೇ ಸಾಕಷ್ಟು ಬಾರಿ ಪೊಲೀಸರಿಗೆ ದೂರು ನೀಡಲು ಯತ್ನಸಿದ್ದೆ. ಈ ವೇಳೆಯಲ್ಲೆಲ್ಲ ಆತ ನನ್ನ ಮೇಲೆ ದೈಹಿಕ ಹಲ್ಲೆ ನಡೆಸುತ್ತಿದ್ದ. ಅಷ್ಟೇ ಅಲ್ಲದೆ ನನ್ನ ಖಾಸಗಿ ಪೋಟೊಗಳನ್ನು ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್​ ಮೇಲೆ ಮಾಡಿ ₹1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ. ಅದರಲ್ಲಿ ಈಗಾಗಲೇ 50 ಲಕ್ಷ ಹಣ ಕೊಟ್ಟಿದ್ದೇನೆ ಎಂದು ನಟಿಯೊಬ್ಬಳು ಮುಂಬೈನ ಸಬ್​ ಅರ್ಬನ್​ ವರ್ಸೊವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

36 ವಯಸ್ಸಿನ ಈ ನಟಿಯ ದೂರಿನ ಮೇರೆಗೆ ಆದಿತ್ಯಾ ಮೇಲೆ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 323 (ಹಲ್ಲೆ) ಹಾಗೂ 384 (ಹಣ ಸುಲಿಗೆ)ನಡಿ ಎಫ್ಐಆರ್​ ದಾಖಲಿಸಿಕೊಂಡಿರುವುದಾಗಿ ಡಿಸಿಪಿ ಮಂಜುನಾಥ್ ತಿಳಿಸಿದ್ದಾರೆ.

ಇನ್ನು ತಮ್ಮ ವಿರುದ್ಧ ಆತ್ಯಾಚಾರ ಆರೋಪವನ್ನು ಆದಿತ್ಯ ಅಲ್ಲಗಳೆದಿದ್ದಾನೆ. ಉದ್ದೇಶಪೂರ್ವಕವಾಗಿ ನನ್ನನ್ನು ಇದರಲ್ಲಿ ಸಿಲುಕಿಸಲಾಗುತ್ತಿದೆ. ಇದು ಪೂರ್ವಯೋಜಿತ ಸಂಚು ಎಂದು ಆತ ಹೇಳಿದ್ದಾನೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.