ETV Bharat / sitara

ಅಸಹಿಷ್ಣುತೆ ಹೇಳಿಕೆ ಪ್ರಕರಣ: ನಟ ಅಮಿರ್ ಖಾನ್ ವಿರುದ್ಧದ ಅರ್ಜಿ ವಜಾಗೊಳಿಸಿದ ಬಿಸ್ಲಾಪುರ್ ಹೈಕೋರ್ಟ್

ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು 2015ರಲ್ಲಿ ಹೇಳಿಕೆ ನೀಡಿದ ಬಾಲಿವುಡ್ ನಟ ಅಮಿರ್​ ಖಾನ್ ವಿರುದ್ಧದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ. ಈ ಮೊದಲು ಅರ್ಜಿ ತಿರಸ್ಕರಿಸಿ ತೀರ್ಪು ನೀಡಿದ್ದ ಆದೇಶವನ್ನು ಮರುಪ್ರಶ್ನಿಸಿ ಸಿವಿಲ್ ಕೋರ್ಟ್​​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

bollywood-actor-aamir-khan
ನಟ ಅಮಿರ್ ಖಾನ್
author img

By

Published : Nov 26, 2020, 11:36 AM IST

ಬಿಸ್ಲಾಪುರ (ಚತ್ತೀಸ್​​​ಗಢ): ದೇಶದಲ್ಲಿ ಅಸಹಿಷ್ಣುತೆ ಹೇಳಿಕೆ ಸಂಬಂಧ ಬಾಲಿವುಡ್​ ನಟ ಅಮಿರ್ ಖಾನ್​ಗೆ ಚತ್ತೀಸ್​​ಗಢದ ಬಿಸ್ಲಾಪುರ್​​ ಹೈಕೋರ್ಟ್​ ರಿಲೀಫ್ ನೀಡಿದೆ. ನಟನ ವಿರುದ್ಧ ಸಲ್ಲಿಕೆಯಾಗಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಈ ಪ್ರಕರಣ ಸಂಬಂಧ ಹೈಕೋರ್ಟ್ ನ್ಯಾಯಮೂರ್ತಿ ಸಂಜಯ್ ಕೆ. ಅಗರ್ವಾಲ್ ನೇತೃತ್ವದ ಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ನವೆಂಬರ್ 2015ರಲ್ಲಿ ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ, ನಾನು ಮತ್ತು ನನ್ನ ಪತ್ನಿ ಕಿರಣ್ ದೇಶ ತೊರೆಯಬೇಕೆಂದಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಈ ಕುರಿತಂತೆ ಅಮಿರ್ ವಿರುದ್ಧ ಹೈಕೋರ್ಟ್​​​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಇಲ್ಲಿನ ರಾಯ್ಪುರ ನಿವಾಸಿ ದೀಪಕ್ ದಿವಾನ್ ಈ ಹೇಳಿಕೆಯ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಐಪಿಸಿ ಸೆಕ್ಷನ್ 153 (ಎ) (ಬಿ) ಅಡಿಯಲ್ಲಿ ಅಮೀರ್ ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿತ್ತು. ಬಳಿಕ ಈ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆದಾಗ್ಯೂ ದೀಪಕ್ ಸಿವಿಲ್ ಕೋರ್ಟ್ ತೀರ್ಪು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಮರು ಪರಿಶೀಲನಾ ಅರ್ಜಿಯನ್ನೂ ಸಹ ಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.